ಅಭಿಪ್ರಾಯ / ಸಲಹೆಗಳು

Crime Reported in : Mangalore East PS

ಪಿರ್ಯಾದಿದಾರರು ಬೆಂಗಳೂರಿನ ರಾಜಾಜಿ ನಗರದಲ್ಲಿ ದಿನಾಂಕ: 11/10/2011 ರಂದು ಎನ್.ಎಚ್ ರಾಜ್ ಚೆರಮೆನ್ ಆಗಿದ್ದು, ಭೀಮಪ್ಪಾ ದಿವಾಟಿ,ಮಾರುತಿ ದೇಸಾಯಿ,ಕೆ.ಬಿ ನಾರಾಯಣ ಶೆಟ್ಟಿ, ಬಿ ವೀರಭದ್ರಪ್ಪ,ಸುಮತಿ ಎಸ್ ಹೆಗ್ಡೆ, ನವಿನ್ ಎಲ್, ಹರಿಕೇಷಯ್ಯಾ ರವರುಗಳು ನಿರ್ದೇಶಕರಾಗಿ ಪಂಚವಟಿ ಮಲ್ಟಿಸ್ಟೇಟ್ ಕೋ ಆಪರೇಟಿವ್ ಲಿಮಿಟೆಡ್ ಎಂಬ ಸೋಸೈಟಿಯು ಆರಂಭಗೊಂಡಿದ್ದು ಇದರ ಸಹ ಶಾಖೆಯು ಸುಮತಿ ಎಸ್ ಹೆಗ್ಡೆ ರವರ ಅಧೀನದಲ್ಲಿ ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುಬ ಸುಮ ಸಧನ 1 ನೆಯ ಮಹಡಿಯಲ್ಲಿ 2016 ರಲ್ಲಿ ಕಾರ್ಯಾರಂಭಗೊಂಡಿರುತ್ತದೆ. ಸದ್ರಿ ಶಾಖೆಯ ಮುಖಾಂತರ ಪಿರ್ಯಾದಿದಾರರನ್ನು ಹಾಗೂ ಇತರರನ್ನು ಸೊಸೈಟಿಯಲ್ಲಿ ಉಳಿತಾಯ ಖಾತೆ,ಠೇವಣಿ ಖಾತೆ,ಆರ್,ಡಿ ಖಾತೆ, ಪಿಗ್ಮೀ ಹಾಗೂ ಶೇರ್ ಬಂಡವಾಳದಲ್ಲಿ ಹಣ ಹೂಡಿಕೆ ಮಾಡಿದರೆ ಹೂಡಿಕೆ ಮಾಡಿದ ಹಣಕ್ಕೆ ಹೆಚ್ಚು ಲಾಭಾಂಶ ಹಾಗೂ ಕಮೀಷನ್ ನೀಡುವುದಾಗಿ ಅಲ್ಲದೇ ಹೂಡಿಗೆ ಮಾಡಿದ ಹಣವು 5 ವರ್ಷ 09 ತಿಂಗಳಲ್ಲಿ ದ್ವಿಗುಣಗೊಳ್ಳುತ್ತದೆ ಎಂಬುದಾಗಿ ಆಶ್ವಾಸಣೆ ನೀಡಿದಂತೆ ಪಿರ್ಯಾದಿದಾರರು ಹಾಗೂ ಇತರರು ಸದ್ರಿ ಸೊಸೈಟಿಯಲ್ಲಿ ಹಣವನ್ನು ಹೂಡಿಕೆ ಮಾಡಿದ್ದು ಅದರಂತೆ ಸದ್ರಿ ಶಾಖೆಯ ಮ್ಯಾನೇಜರ್ ಹರ್ಷಿತಾ ರವರು ಸೊಸೈಟಿಯ ಪರವಾಗಿ ಹಣ ಪಡೆದು ಆಕೆಯ ಸಹಿಯನ್ನು ಮಾಡಿ ಹಣ ಹೂಡಿಕೆ ಮಾಡಿದವರಿಗೆ ಬಾಂಡ್ ಗಳನ್ನು ನೀಡಿರುತ್ತಾರೆ. ಹೂಡಿಕೆ ಮಾಡಿದ ಹಣದ ಬಾಂಡ್ ನ ಮೆಚ್ಯೂರಿಟಿ ದಿನಾಂಕ ಮುಗಿದರೂ ದಿನಾಂಕ: 16-04-2020 ರಿಂದ ಹಣವನ್ನು ಮರು ಪಾವತಿ ಮಾಡದೇ, ಅಲ್ಲದೇ ಹಣ ಹೂಡಿಕೆ ಮಾಡಿದ ಖಾತೆದಾರರಿಗೆ ಯಾವುದೇ ಸೂಚನೆಯನ್ನು ನೀಡದೆ ಪಿರ್ಯಾದಿದಾರರು ಹಾಗೂ ಸೊಸೈಟಿಯ ಇತರ ಖಾತೆದಾರರಿಗೆ ಹೂಡಿಕೆ ಮಾಡಿದ ಹಣವನ್ನು ಮರುಪಾವತಿ ಮಾಡದೇ ಪಂಚವಟಿ ಮಲ್ಟಿಸ್ಟೇಟ್ ಕೋ ಆಪರೇಟಿವ್ ಲಿಮಿಟೆಡ್ ಸೊಸೈಟಿಯ ಚೇರಮೆನ್ ಎನ್.ಎಚ್ ರಾಜ್ ,7 ಜನ ನಿರ್ದೇಶಕರು ಮತ್ತು ಮಲ್ಲಿಕಟ್ಟೆ ಶಾಖೆಯ ಮ್ಯಾನೆಜರ್ ಹರ್ಷಿತ ರವರು ನಂಬಿಕೆ ದ್ರೋಹ ಹಾಗೂ ವಂಚನೆಯನ್ನು ಮಾಡಿದ್ದು ಸದ್ರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳಬೇಕಾಗಿ ಎಂಬಿತ್ಯಾದಿ.

 

Crime Reported in : Urva PS

ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಜ್ಯೋತಿ ನಿಕೇತನ, ಬಿಜೈ ನ್ಯೂ ರೋಡ್, ಬಿಜೈ, ಮಂಗಳೂರು ಎಂಬಲ್ಲಿನ ಮನೆಯಿಂದ ಪಿರ್ಯಾದಿ ಮಂಜುಳಾ ಅನಿಲ್ ಎಂಬವರು ಈ ದಿನ ದಿನಾಂಕ 28-09-2022 ರಂದು ಕೆಲಸದ ನಿಮಿತ್ತ ಬೆಳಿಗ್ಗೆ 10:30 ರ ವೇಳೆಗೆ ಮನೆಗೆ ಬೀಗ ಹಾಕಿ ಹೊರಗಡೆ ಹೋಗಿದ್ದು ವಾಪಾಸು ಮದ್ಯಾಹ್ನ 12:30 ರ  ವೇಳೆಗೆ ಮನೆಗೆ ಬಂದು ಎದುರಿನ ಬಾಗಿಲನ್ನು ತೆರೆದು ಒಳಗಡೆ ಹೋಗಿ ನೋಡಿದಾಗ ಮನೆಯ ಹಿಂಬದಿಯ ಬಾಗಿಲು ತೆರೆದುಕೊಂಡಿದ್ದು ಹತ್ತಿರ ಹೋಗಿ ನೋಡಿದಾಗ ಬಾಗಿಲನ್ನು ಯಾರೋ ಕಳ್ಳರೂ ಬಲವಾದ ಸಾಧನದಿಂದ ಮುರಿದು ಮನೆ ಒಳಗೆ ಪ್ರವೇಶಿಸಿ ಮನೆಯ ಬೆಡ್ ರೂಮ್ ನ ಕಪಾಟಿನ ಲಾಕರ್ ನಲಿದ್ದ ಸುಮಾರು 4 ಲಕ್ಷ ರೂ ಬೆಲೆ ಬಾಳುವ ಚಿನ್ನದ ಆಭರಣಗಳಾದ 1 ಬಳೆ 28 ಗ್ರಾಂ, 1 ಚೈನ್ 40 ಗ್ರಾಂ, 1 ಚೈನ್ 8 ಗ್ರಾಂ, ಕಿವಿಯ ಓಲೆ 1 ಜೊತೆ 15 ಗ್ರಾಂ ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬಿತ್ಯಾದಿ.

 

2) ಪಿರ್ಯಾದಿದಾರರಾದ ಯಾದವ ರವರು ದಿನಾಂಕ 04-06-2022 ರಂದು ಸಮಯ ಸಂಜೆ 04:00 ಗಂಟೆಗೆ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ಬಿಜೈ ಕಾಪಿಕಾಡ್ ರಸ್ತೆಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರು ಸುರಭಿ ಹೋಟೇಲ್ ಹತ್ತಿರ ಅವರ ಬಾಬ್ತು KA19HE1021 ನೇ ನೊಂದಣಿ ನಂಬ್ರದ ಹೋಂಡಾ ಡಿಯೋ ಸ್ಕೂಟರ್ ನ್ನು ನಿಲ್ಲಿಸಿ ಮೆಡಿಕಲ್ ಶಾಪ್ ಗೆ ಹೋಗಿ ವಾಪಾಸು ಬರುವುದರ ಒಳಗೆ ಸ್ಕೂಟರ್ ನಿಲ್ಲಿಸಿದ ಸ್ಥಳದಲ್ಲಿ ಇರದೇ ಇದ್ದು ಪಿರ್ಯಾದಿದಾರರ ಸ್ಕೂಟರ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಪಿರ್ಯಾದಿದಾರರು ಎರಡು ದಿನಗಳ ಕಾಲ ಎಲ್ಲಾಕಡೆ ಹುಡುಕಾಡಿ ನಂತರ ಅಗತ್ಯ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದವರು ದಿನಾಂಕ 28-09-2022 ರಂದು ಬೆಂಗಳೂರಿನಿಂದ ವಾಪಾಸು ಬಂದು ಕಳೆದುಹೋದ ಸ್ಕೂಟರ್ ಈ ವರೆಗೆ ಪತ್ತೇಯಾಗದೇ ಇದ್ದ ಕಾರಣ ದೂರು ನೀಡಿರುವುದಾಗಿದೆ, ಕಳೆದುಹೋದ ಸ್ಕೂಟರ್ ನ ಮೌಲ್ಯ ಸುಮಾರು 60,000 ರೂಪಾಯಿ ಆಗಿರುತ್ತದೆ ಎಂಬಿತ್ಯಾದಿ.

 

Crime Reported in : Mangalore South PS

 ದಿನಾಂಕ 29-09-2022 ರಂದು ಮಧ್ಯಾಹ್ನ 12-50 ಗಂಟೆ ಸುಮಾರಿಗೆ, ಮಂಗಳೂರು ನಗರದ ಮಹಾಕಾಳಿ ಪಡ್ಪು ಮೈದಾನದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಆರೋಪಿ ಮಹಮ್ಮದ್ ಸಾನಿದ್, ಪ್ರಾಯ: 20 ವರ್ಷ,  ವಾಸ: ಅಸೈ ಗುಡ್ಡೆಹೌಸ್, ಅಸೈಗೋಳಿ ಅಂಚೆ, ಮಂಜನಾಡಿ ಗ್ರಾಮ, ಮಂಗಳೂರು ತಾಲೂಕು ಎಂಬಾತನನ್ನು ವಶಕ್ಕೆ ಪಡೆದುಕೊಂಡು  ವೈದ್ಯಕೀಯ ತಪಾಸಣೆಗಾಗಿ ಮಂಗಳೂರು ಎ.ಜೆ ಆಸ್ಪತ್ರೆಯ ವೈಧ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ಪರೀಕ್ಷೆಗೊಳಪಡಿಸಿದಾಗ, ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುವುದರಿಂದ ಆರೋಪಿಯ ವಿರುದ್ದ  ಎನ್ ಡಿ.ಪಿ.ಎಸ್ ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.

 

ಇತ್ತೀಚಿನ ನವೀಕರಣ​ : 29-09-2022 07:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080