ಅಭಿಪ್ರಾಯ / ಸಲಹೆಗಳು

Crime Reported in : Mangalore West Traffic PS        

ದಿನಾಂಕ:28-11-2022ರಂದು ಪಿರ್ಯಾದು ABDHUL KHADER SHABAZ ದಾರರು ಹಾಗೂ ಅವರ ಸ್ನೇಹಿತ ತಾವು ಕೆಲಸ ಮಾಡಿಕೊಂಡಿದ್ದ ರೆಸ್ಟೋರೆಂಟ್ ನಲ್ಲಿ ರಾತ್ರಿ ಕೆಲಸ ಮುಗಿಸಿ ತಮ್ಮ ಮನೆಗೆ ಹೋಗಲು ಪಿರ್ಯಾದಿದಾರರು ಹಾಗೂ ಅವರ ಸ್ನೇಹಿತ ಶಾದ್ ರವರು ದ್ವಿಚಕ್ರ ವಾಹನದಲ್ಲಿ ಬರುತ್ತಾ ಸಮಯ ಸುಮಾರು 23:45 ಗಂಟೆಯ ವೇಳೆಗೆ ಮಂಗಳೂರು ರೊಜಾರಿಯೋ ರಸ್ತೆಯ ಭಟ್ಕಳ ಅರ್ಬನ್ ಕೋ-ಆಪರೇಟಿವ್ ಸೊಸೈಟಿ ಎದುರು ತಲುಪುವಾಗ ಸದ್ರಿ ಬ್ಯಾಂಕಿನ ಮುಂಭಾಗದಲ್ಲಿ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಬಿದ್ದುಕೊಂಡಿರುವುದನ್ನು ಗಮನಿಸಿ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಬಿದ್ದುಕೊಂಡಿದ್ದ ವ್ಯಕ್ತಿಯ ಬಳಿ ಹೋಗಿ ನೋಡಿದಾಗ ಸದ್ರಿ ವ್ಯಕ್ತಿಯ ಮುಖದಲ್ಲಿ ಮತ್ತು ತಲೆಯಲ್ಲಿ ರಕ್ತ ಬರುತ್ತಿದ್ದು, ಸದ್ರಿ ವ್ಯಕ್ತಿಯು ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಿರುವುದಾಗಿದೆ. ಮೃತಪಟ್ಟ ವ್ಯಕ್ತಿಯು ಸುಮಾರು 75 ವರ್ಷ ಪ್ರಾಯದವನಾಗಿದ್ದು, ಘಟನಾ ಸ್ಥಳದಲ್ಲಿ ವಾಹನದ ಟಯರ್ ಮಾರ್ಕ್ ಇರುವುದರಿಂದ ಸದ್ರಿ ವ್ಯಕ್ತಿಯು ರಸ್ತೆ ಬದಿಯಲ್ಲಿ ಯಾ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಯಾ ರಸ್ತೆಯಲ್ಲಿ ಕುಳಿತುಕೊಂಡಿರುವಾಗ ಯಾವುದೋ ಅಪರಿಚಿತ ವಾಹನದ ಚಾಲಕ ಸಾರ್ವಜನಿಕ ರಸ್ತೆಯಲ್ಲಿ ತೀರಾ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಸದ್ರಿ ವ್ಯಕ್ತಿಗೆ ಡಿಕ್ಕಿಪಡಿಸಿ ರಸ್ತೆಗೆಸೆಯಲ್ಪಟ್ಟು ತಲೆಗೆ ಹಾಗೂ ಮುಖಕ್ಕೆ ಗಂಭೀರ ಸ್ವರೂಪದ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ. ಈ ಅಪಘಾತವು ದಿನಾಂಕ:28-11-2022ರ ಸುಮಾರು 22:45 ಗಂಟೆಯಿಂದ 23:30 ಗಂಟೆಯ ಮಧ್ಯಾವಧಿಯಲ್ಲಿ ನಡೆದಿರಬಹುದಾಗಿದೆ ಎಂಬಿತ್ಯಾದಿ.

Traffic North Police Station                       

ಪಿರ್ಯಾದಿ Alex D Souza ದಾರರು ದಿನಾಂಕ: 28-11-2022 ರಂದು ಅವರ ಬಾಬ್ತು KA-19-AC-1821 ನಂಬ್ರದ ಬಾಡಿಗೆ ಕಾರನ್ನು ಬಾಡಿಗೆ ಸಲುವಾಗಿ ಕೊಂಚಾಡಿ ಕಡೆಯಿಂದ ಪಕ್ಷೀಕೆರೆ ಕಡೆಗೆ ಹೋಗಿದ್ದು ಅಲ್ಲಿಂದ ವಾಪಾಸು ಅದೇ ಮಾರ್ಗದಲ್ಲಿ ಬರುತ್ತಾ ಅಂದರೆ ಪಕ್ಷಿಕೆರೆ ಕಡೆಯಿಂದ ಹಳೆಯಂಗಡಿ ಕಡೆಗೆ ಹೋಗುವ ರಸ್ತೆಯಲ್ಲಿ ರಾತ್ರಿ ಸಮಯ ಸುಮಾರು 10:20 ಘಂಟೆಗೆ ಕೊಯ್ಕುಡೆ ಬಸ್ ಸ್ಟ್ಯಾಂಡ್ ಹತ್ತಿರ ತಲುಪುತ್ತಿದ್ದಂತೆ ಪಿರ್ಯಾದಿದಾರರ ಮುಂದಿನಿಂದ ಹೋಗುತ್ತಿದ್ದ ಕಾರೊಂದನ್ನು ಅದರ ಚಾಲಕ ನಿಧಾನಿಸುತ್ತಿದ್ದಂತೆ ಪಿರ್ಯಾದಿದಾರರು ಕೂಡ ಚಾಲನೆ ಮಾಡುತ್ತಿದ್ದ ಕಾರನ್ನು ನೀಧಾನ ಮಾಡಿದ್ದು ಆ ಸಮಯ ಪಿರ್ಯಾದಿದಾರರ ಕಾರಿನ ಹಿಂದಿನಿಂದ ಕಾರು ನಂಬ್ರ KA-19-MM-2748 ನೇದನ್ನು ಅದರ ಚಾಲಕ ನಿರ್ಲಕ್ಷ್ಯತನ ಹಾಗೂ ದುಡುಕುತನದಿಂದ ಹಾಗೂ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಹಿಂಬದಿಗೆ ಡಿಕ್ಕಿ ಪಡಿಸಿದ್ದು ಇದರ ಪರಿಣಾಮ ಪಿರ್ಯಾದಿದಾರರ ಕಾರಿನ ಹಿಂಬದಿಯ ಡಿಕ್ಕಿ, ಬಂಪರ್, ಹಿಂಬದಿಯ ಬಲಬದಿಯ ಟೈಲ್ ಲ್ಯಾಂಪ್, ಬಲಬದಿ ಡೋರ್ ನ ಹಿಂಬಾಗ ಜಖಂಗೊಂಡಿರುತ್ತದೆ, ಈ ಅಪಘಾತದಲ್ಲಿ ಯಾರಿಗೂ ಯಾವುದೇ ಗಾಯಗಳಾಗಿರುವುದಿಲ್ಲ. ಅಲ್ಲದೇ ಅಪಘಾತ ಪಡಿಸಿದ ಕಾರಿನ ಚಾಲಕ ಪಿರ್ಯಾದಿದಾರರೊಂದಿಗೆ ಮಾತನಾಡಿ ಸರಿಯಾಗಿ ಯಾವುದೇ ಮಾಹಿತಿಯನ್ನು ನೀಡದೆ ಕಾರನ್ನು ಚಾಲನೆ ಮಾಡಿಕೊಂಡು ಅಪಘಾತ ಸ್ಥಳದಿಂದ ಹೋಗಿರುತ್ತಾರೆ ಡಂಬಿತ್ಯಾದಿ.

Moodabidre PS

ಪಿರ್ಯಾದಿ ASHOK AMIN ದಾರರು ಸದ್ರಿ ವಿಳಾಸದಲ್ಲಿ ಸ್ಥಿರಾಸ್ತಿಗಳನ್ನು ಹೊಂದಿದ್ದು ಅದೇ ರೀತಿ ಜಾನುವಾರುಗಳನ್ನು ಸಾಕಿಕೊಂಡಿರುತ್ತಾರೆ, ಪಿರ್ಯಾದುದಾರರ ನೆರೆಕರೆಯ ವಾಸಿ ಹೆನ್ರಿ ಎಂಬಾತನು ಪಿರ್ಯಾದಿದಾರರ ಮೇಲೆ ಯಾವುದೋ ವಿಷಯಕ್ಕೆ ದ್ವೇಷವನ್ನು ಹೊಂದಿದ್ದು ದಿನಾಂಕ 27-11-2022 ರಂದು ಪಿರ್ಯಾದಿದಾರರು ಸಾಕಿದ 8 ತಿಂಗಳ ಗರ್ಭವನ್ನು ಹೊಂದಿದ ಹಸುವನ್ನು ಮೇಯಲು ಬಿಟ್ಟ ಸಂದರ್ಭದಲ್ಲಿ ಆರೋಪಿತನು ಪಿರ್ಯಾದಿದಾರರಿಗೆ ತೊಂದರೇ ನೀಡುವ ದುರುದ್ದೇಶದಿಂದ ಹಸುವನ್ನು ಆಕ್ರಮವಾಗಿ ಕೂಡಿ ಅಮಾನುಷವಾಗಿ ಚಿತ್ರ ಹಿಂಸೆ ನೀಡಿ ಹಸುವಿನ ಕಣ್ಣಿಗೆ ಮತ್ತು ದೇಹದ ಇತರ ಭಾಗಗಳಿಗೆ ತೀವ್ರತರಹದ ಗಾಯಗಳನ್ನು ಮಾಡಿದ್ದು ಈ ವಿಷಯವು ಪಿರ್ಯಾದಿದಾರಿಗೆ ಸುಮಾರು 12-30  ಗಂಟೆಗೆ ತಿಳಿದಿದ್ದು ನಂತರ ಹಸುವಿನ ಶುಶ್ರೂಷೆಗಾಗಿ ವೈಧ್ಯರ ಮೂಲಕ ಚಿಕಿತ್ಸೆ ನೀಡಿಸಿರುತ್ತಾರೆ. ಚಿಕಿತ್ಸೆಯ ಬಗ್ಗೆ ಸುಮಾರು 2000 ರೂ ಖಾರ್ಚಗಿದ್ದು, ಆರೋಪಿಯ ಈ ಕೃತ್ಯವು ತೀರಾ ಅಮಾನುಷವಾಗಿದ್ದು ಶಿಕ್ಷಾರ್ಹ ಅಪರಾಧ ವಾಗಿದ್ದು, ಆರೋಪಿತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಎಂಬಿತ್ಯಾದಿಯಾಗಿರುತ್ತದೆ.

Traffic South Police Station

ದಿನಾಂಕ: 28-11-202 ರಂದು ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ  ಹೋಗುವ ರಾ ಹೆ 66  ರ ರಸ್ತೆ ಬದಿಯಲ್ಲಿರುವ NHAI  ಕ್ಯಾಂಟೀನ್ ನ ಎದುರು ವಸಂತ ಕುಮಾರ್ ಎಂಬವರು ಮಂಗಳೂರು ಕಡೆಯಿಂದ ತಲಪಾಡಿ ಕಡೆಗೆ ಹೋಗುವ ರಾ ಹೆ 66 ಕಾಂಕ್ರೀಟ್ ರಸ್ತೆಯನ್ನು ರಸ್ತೆಯ ಪೂರ್ವ ದಿಕ್ಕಿನಿಂದ ಪಶ್ಚಿಮದ ದಿಕ್ಕಿಗೆ ರಸ್ತೆ ದಾಟುತ್ತಿದ್ದ ಸಮಯ ಸುಮಾರು ಮದ್ಯಾಹ್ನ 2-45 ಗಂಟೆಗೆ  ಮಂಗಳೂರು ಕಡೆಯಿಂದ ಬರುತ್ತಿದ್ದ ಲಾರಿ ನಂಬ್ರ KL-13-A-3220 ನೇದನ್ನು ಅದರ ಚಾಲಕ ನಾರಾಯಣ ಪೂಜಾರಿ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು  ರಸ್ತೆ ದಾಟುತ್ತಿದ್ದ  ವಸಂತ ಕುಮಾರ್ ರವರಿಗೆ ಡಿಕ್ಕಿಪಡಿಸಿದ  ಪರಿಣಾಮ ಸದ್ರಿಯವರು ಕಾಂಕ್ರೀಟ್ ರಸ್ತೆಗೆ ಎಸೆಯಲ್ಪಟ್ಟರು. ಆ ಕೂಡಲೇ ಪಿರ್ಯಾದಿದಾರರು ಅಪಘಾತ ಸ್ಥಳಕ್ಕೆ ಹೋಗಿ ಅಲ್ಲಿ ಸೇರಿದ ಜನರೊಂದಿಗೆ ರಸ್ತೆಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಉಪಚರಿಸಿ ನೋಡಲಾಗಿ ಅವರ ತಲೆಯ ಮುಂಬದಿಗೆ ಗಂಭೀರ ಸ್ವರೂಪದ ರಕ್ತಗಾಯ ಹಾಗೂ ಕೈ ಕಾಲುಗಳಿಗೆ ತರಚಿದ ಗಾಯವಾಗಿದ್ದು ನಂತರ ಅಲ್ಲಿ ಸೇರಿದ ಜನರು ಹಾಗೂ ಡಿಕ್ಕಿಪಡಿಸಿದ ಲಾರಿ ಚಾಲಕ ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಆಂಬುಲೆನ್ಸ್ ವೊಂದರಲ್ಲಿ ದೇರಳಕಟ್ಟೆಗೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ವೈದ್ಯರು ಗಾಯಾಳು ವಸಂತ ಕುಮಾರ್ ರವರು ಅವರಿಗಾದ ಗಂಭೀರ ಸ್ವರೂಪದ ಗಾಯಗಳಿಂದಾಗಿ ಮೃತಪಟ್ಟಿರುತ್ತಾರೆ ಎಂದು  ತಿಳಿಸಿರುತ್ತಾರೆ ಎಂಬಿತ್ಯಾದಿ .

Moodabidre PS

ಪಿರ್ಯಾದಿದಾರರ ಚಿಕ್ಕಮ್ಮ ನಾದ ಜೆಸಿಂತಾ ಮಿನೇಜಸ್ ರವರು ಎಸ್ಟೇಟ್ ರೀಜೊಟ್ ಅಶ್ವತ್ಥಪುರ ಎಂಬಲ್ಲಿ ಕೆಲಸ ಮಾಡಿಕೊಂಡಿದ್ದು ಅಲ್ಲಿಯೇ ಕೆಲಸ ಮಾಡಿಕೊಂಡಿದ್ದ ಹೇಮ ಮತ್ತು ಸುಶ್ಮಾ ಎಂಬುವರು ತೊಂದರೆ ಕೊಡುತ್ತಿದ್ದಾರೆ ಎಂಬ ಕಾರಣಕ್ಕೆ ಅಲ್ಲಿಂದ ಕೆಲಸ ಬದಲಾಯಿಸಿ ಅದೇ ಮಾಲೀಕರ ಕೊಡ್ಯಡ್ಕದಲ್ಲಿರುವ ದೇವಸ್ಥಾನದಲ್ಲಿ ಸುಮಾರು ಎರಡು ವಾರಗಳಿಂದ ಕೆಲಸ ಮಾಡಿಕೊಂಡಿದ್ದು,  ದಿನಾಂಕ 27-11-2022 ರಂದು ಮಧ್ಯರಾತ್ರಿಯವರೆಗೂ ಮೊಬೈಲ್ ನೋಡುತ್ತಾ ಇದ್ದವರು ಆ ಬಳಿಕ ಎಲ್ಲಿದ್ದಾರೆಂದು ಕಾಣಸಿಗದೇ ಇದ್ದು ಬೆಳಿಗ್ಗೆ ಸುಮಾರು 6 ಗಂಟೆಯ ವೇಳೆಗೆ ಪಿರ್ಯಾದುದಾರರ ಮನೆಯ ಬಚ್ಚಲು ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರು ಆತ್ಮಹತ್ಯೆ ಮಾಡಿಕೊಳ್ಳಲು ಅವರ ಜೊತೆಯಲ್ಲಿ ಕೆಲಸ ಮಾಡಿಕೊಂಡಿದ್ದ ಹೇಮ ಮತ್ತು ಸುಶ್ಮಾ ಎಂಬುವರು ಕಾರಣ ಎಂಬುದಾಗಿ ಪಿರ್ಯಾದುದಾರರ ಮೊಬೈಲ್ ಗೆ ಇಂಗ್ಲೀಷ್ ನಲ್ಲಿ ಸಂದೇಶವೊಂದನ್ನು ಕಳುಹಿಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 29-11-2022 06:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080