ಅಭಿಪ್ರಾಯ / ಸಲಹೆಗಳು

Crime Reported in : Urva PS

ಪಿರ್ಯಾದಿದಾರರಾದ ಶ್ರೀ ನೇಮ್ ರಾಜ್ ರವರ ಮಗ ಹೇಮಚಂದ್ರ(29) ರವರು ಬಿಲ್ಡಿಂಗ್ ಗುತ್ತಿಗೆದಾರ ಕೈಕೆಳಗೆ ಇಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದು, ದಿನಾಂಕ 29-09-2022 ರಂದು ಬೆಳಿಗ್ಗೆ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ದಂಬೇಲ್ ನಲ್ಲಿರುವ ಲವಕುಮಾರ್ ರವರ ಬಾಬ್ತು ನಿರ್ಮಾಣ ಹಂತದ ಮನೆ ಕಟ್ಟಡದಲ್ಲಿ ಇಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದು, ಕೆಲಸ ಮಾಡುವ ಸಮಯ ಗುತ್ತಿಗೆದಾರ ಮತ್ತು ಮನೆಯ ಮಾಲೀಕರ  ರವರು ಕೆಲಸ ಮಾಡುತ್ತಿದ್ದ ಹೇಮಚಂದ್ರರವರಿಗೆ ಯಾವುದೇ ರಕ್ಷಣೆ ಸಲಕರಣೆ ಗ್ಲೌಸ್ ಮತ್ತು ಶೂ ನೀಡದೆ ಹಾಗೂ ಸರಿಯಾದ ಮಾರ್ಗದರ್ಶನ ನೀಡದೆ, ಅಲ್ಲದೆ ದುಸ್ಥಿಯಲ್ಲಿದ್ದ ಕರಂಟ್ ಕೇಬಲ್ ಅಳವಡಿಸಿದ ಯಂತ್ರವನ್ನು ಕೆಲಸಕ್ಕೆ ನೀಡಿರುವುದರಿಂದ ಕೆಲಸ ಮಾಡುತ್ತಿದ್ದ ಹೇಮಚಂದ್ರ ರವರಿಗೆ ಸಮಯ ಸುಮಾರು ಮಧ್ಯಾಹ್ನ 02-15 ರ ವೇಳೆಗೆ ಕರೆಂಟ್ ಕೇಬಲ್ ಜಾಯಿಂಟ್ ತಾಗಿ ವಿದ್ಯುತ್ ಶಾಕ್ ಹೊಡೆದು ಕೆಳಗೆ ಬಿದ್ದವರನ್ನು ಚಿಕಿತ್ಸೆ ಬಗ್ಗೆ ಎ ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಇಲ್ಲಿ ತುರ್ತು ನಿಗಾ ಚಿಕಿತ್ಸಾ ಕೊಠಡಿಯಲ್ಲಿ ಮಧ್ಯಾಹ್ನ 03-06 ಗಂಟೆಗೆ ಪರಿಕ್ಷೀಸಿದ ವೈದ್ಯರು ಹೇಮಚಂದ್ರ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಹೇಮಚಂದ್ರ ರವರ ಮರಣಕ್ಕೆ ಗುತ್ತಿಗೆದಾರರ ಮತ್ತು ಮನೆಯ ಮಾಲೀಕರ ನಿರ್ಲಕ್ಷತನವೇ ಕಾರಣವಾಗಿರುತ್ತದೆ ಎಂಬಿತ್ಯಾದಿ.

 

Crime Reported in : Mangalore North PS                                                   

ಪಿರ್ಯಾದಿದಾರರಾದ  ಎಂ ಕುಮಾರೇಶ್ ಎಂಬವರು  K.M Enterprises   ಎಂಬ ಸಂಸ್ಥೆಯನ್ನು ನಡೆಸಿಕೊಂಡಿದ್ದು,   ಹಿಟಾಚಿ, ಜೆಸಿಬಿ ಯಂತ್ರಗಳಲ್ಲಿ ಜಾಗವನ್ನು ಸಮತಟ್ಟು ಮಾಡುವ ಕೆಲಸವನ್ನು ಗುತ್ತಿಗೆ ಆಧಾರದಲ್ಲಿ ಮಾಡುತ್ತಿದ್ದವರು,  ಹೊಸ ಮಾದರಿಯ ಹಿಟಾಚಿ ಯಂತ್ರವನ್ನು ಖರೀದಿ ಮಾಡುವ  ಉದ್ದೇಶದಿಂದ ತನ್ನ ಕೆಲಸಗಾರ ಕಿಶೋರ್ ಕುಮಾರ್ ಎಂಬಾತನ ಮುಖಾಂತರ   ಮಹಾರಾಷ್ಟ್ರದ ಅಮರವತಿ ಎಂಬಲ್ಲಿನ  ವಾಸಿ ಆರೋಪಿ ಅಮೋಲ್ ಸರ್ಜೇರಾವ್ ಉರ್ಕುಡೆ ಎಂಬವರ ಬಳಿ  ಇದ್ದ   ಹಿಟಾಚಿ ಯಂತ್ರವನ್ನು  ಮಾರಾಟ ಮಾಡುವ ವಿಚಾರ ತಿಳಿದು,  ಕಿಶೋರ್ ಕುಮಾರ್ ರವರನ್ನು   ಹಿಟಾಚಿ ಯಂತ್ರದ ಖರೀದಿ ಬಗ್ಗೆ  ಮಹಾರಾಷ್ಟ್ರಕ್ಕೆ ಕಳುಹಿಸಿಕೊಟ್ಟು, ಯಂತ್ರವನ್ನು ನೋಡಿದ ಬಳಿಕ ಪಿರ್ಯಾದಿದಾರರು  ಹಿಟಾಚಿ ಯಂತ್ರವನ್ನು   ಖರೀದಿ ಮಾಡಲು ಅಮೋಲ್ ರವರ ಮೊಬೈಲ್ ನಂಬ್ರ: 8329992332 ನೇದಕ್ಕೆ ಮಾತನಾಡಿ ಒಂದು ಹಿಟಾಚಿ  ಯಂತ್ರವನ್ನು  ರೂಪಾಯಿ 13,00,000/- ಹಣಕ್ಕೆ ಖರೀದಿ ಮಾಡಲು ಒಪ್ಪಿಕೊಂಡು, ಆರೋಪಿ ತಿಳಿಸಿದಂತೆ   ಮುಂಗಡ ಹಣ ರೂ 10,00,000/- ಹಣವನ್ನು ನಗರದ ಪಿವಿಎಸ್ ಜಂಕ್ಷನ್ ಬಳಿ ಇರುವ IOB   ಬ್ಯಾಂಕ್ ಖಾತೆ ನಂಬ್ರ: ನೇದರಿಂದ ಆರೋಪಿ ಅಮೋಲ್ ಸರ್ಜೇರಾವ್ ಉರ್ಕುಡೆ ಎಂಬಾತನು ನೀಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್.ಬಿ ಖಾತೆ ನಂಬ್ರ:  ನೇದಕ್ಕೆ ರೂಪಾಯಿ 10,00,000/- ಹಣವನ್ನು ವರ್ಗಾಯಿಸಿ ಮಹಾರಾಷ್ಟ್ರದ ಅಮರವತಿಗೆ ಅದೇ ದಿನಾಂಕ 26-09-2022 ರಂದು  ತಲುಪಿ ಪಿರ್ಯಾದಿದಾರರು ಕಿಶೋರ್  ಕುಮಾರ್ ನೊಂದಿಗೆ  ಹಿಟಾಚಿ ಯಂತ್ರ ನಿಲ್ಲಿಸಿದ್ದ ಜಾಗ  ಸಿಗದೆ ಇದ್ದುದರಿಂದ ಆರೋಪಿ ಅಮೋಲ್ ಎಂಬಾತನಿಗೆ  ಪದೇ ಪದೇ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದ್ದು,  ಆರೋಪಿ ಅಮೋಲ್ ಎಂಬಾತನು  ಪಿರ್ಯಾದಿದಾರರಿಗೆ ಹಿಟಾಚಿ ಯಂತ್ರವನ್ನು ರೂ 13,00,000/- ರೂಪಾಯಿಗೆ  ಮಾರಾಟ ಮಾಡುವುದಾಗಿ  ನಂಬಿಸಿ ಪಿರ್ಯಾದಿದಾರರಿಂದ ರೂ 10,00,000/- ಹಣವನ್ನು  ಆತನ ಬ್ಯಾಂಕ್ ಗೆ  ವರ್ಗಾಯಿಸಿಕೊಂಡು ಹಿಟಾಚಿ ಯಂತ್ರವನ್ನು ನೀಡದೆ ಹಾಗು ಹಣವನ್ನು ಕೂಡ ವಾಪಾಸು ಕೊಡದೆ ತಪ್ಪಿಸಿ ಪಿರ್ಯಾದಿದಾರರಿಗೆ   ನಂಬಿಕೆ ದ್ರೋಹ ಮತ್ತು ಮೋಸ ಮಾಡಿರುತ್ತಾರೆ ಎಂಬಿತ್ಯಾದಿ.

 

Crime Reported in : : Kankanady Town PS                                                        

ಪಿರ್ಯಾದುದಾರರು Nagaraj Ramananda Naik ಉತ್ತರ ಕನ್ನಡ ಜಿಲ್ಲೆ ಅಂಕೋಲದವರಾಗಿದ್ದು ವ್ಯವಸಾಯ ವೃತ್ತಿ ಮಾಡಿಕೊಂಡಿರುವುದಾಗಿದೆ. ಪಿರ್ಯಾದುದಾರರ ಸಹೋದರ ರಾಮಮೂರ್ತಿ ರಮಾನಂದ ನಾಯಕ್ (38) ವಿವಾಹ ವಿಚ್ಚೇದಿತರಾಗಿದ್ದು. ಒಂದು ವರ್ಷದಿಂದ ಮಂಗಳೂರು ನಗರದ ಪಂಪ್ ವೆಲ್ ನ  ಎಂಬೆಸಿ ಫ್ಲಾಝಾದಲ್ಲಿರುವ ಎಸ್.ಕೆ ಗ್ರೂಪ್ ಮಾರ್ಕೇಟಿಂಗ್ ಸಂಸ್ಥೆಯಲ್ಲಿ ಸೇಲ್ಸ್ ಎಗ್ಸಿಕ್ಯೂಟಿವ್ ಆಗಿ ಕೆಲಸ ಮಾಡಿಕೊಂಡಿರುವುದಾಗಿದೆ. ದಿನಾಂಕ 25-09-2022 ರಂದು ಪಿರ್ಯಾದುದಾರರ ತಮ್ಮ ಕೆಲಸ ಮಾಡುತ್ತಿರುವ ಕಂಪೆನಿಯವರು ದೂರವಾಣಿ ಕರೆ ಮಾಡಿ ದಿನಾಂಕ 21-01-2022 ರಂದು ಕೆಲಸಕ್ಕೆಂದು ಕಛೇರಿಯಿಂದ ಹೋದವರು ರಾತ್ರಿಯಾದರೂ ಹಿಂತಿರುಗಿ ಬಂದಿರುವುದಿಲ್ಲವೆಂದು, ಕರೆಮಾಡಿದಲ್ಲಿ ಮೊಬೈಲ್ ಸ್ವಿಚ್ಡ್ ಆಫ್ ಆಗಿರುವುದಾಗಿ ಮತ್ತು ಸ್ಥಳೀಯವಾಗಿ ಹುಡುಕಾಡಿದಲ್ಲಿ ಪತ್ತೆಯಾಗದಿರುವುದಿಲ್ಲವೆಂದು ತಿಳಿಸಿರುತ್ತಾರೆ. ಅದರಂತೆ ಪಿರ್ಯಾದುದಾರರು ಸಂಬಂದಿಕರ ಮನೆ ಹಾಗೂ ಬೇರೆ ಎಲ್ಲ ಕಡೆಗಳಲ್ಲಿ ಹುಡುಕಾಡಿ, ದಿನಾಂಕ 29-09-2022 ರಂದು ಮಂಗಳೂರಿಗೆ ಬಂದು ಎಸ್.ಕೆ ಗ್ರೂಪ್ ಮಾರ್ಕೇಟಿಂಗ್ ಸಂಸ್ಥೆಯ ಮ್ಯಾನೇಜರ್ ಕೇಶವ ಮೂರ್ತಿ ರವರೊಂದಿಗೆ ಠಾಣೆಗೆ ಬಂದು ದೂರು ನೀಡಿರುತ್ತಾರೆ ಎಂಬಿತ್ಯಾದಿ.

 

 

ಇತ್ತೀಚಿನ ನವೀಕರಣ​ : 30-09-2022 06:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080