ಅಭಿಪ್ರಾಯ / ಸಲಹೆಗಳು

Crime Reported in : Moodabidre PS

ದಿನಾಂಕ: 25/26-11-2022 ರಂದು ರಾತ್ರಿ ಸಮಯ ಮೂಡಬಿದ್ರೆ ತಾಲೂಕು ಮೂಡಬಿದ್ರೆಯ ಮುಖ್ಯ ರಸ್ತೆಯ ಬದಿಯಲ್ಲಿರುವ ಪಿರ್ಯಾದಿದಾರರ ಬಾಬ್ತು ಜಿ,ಕೆ ಡೆಕೋರೆಟ್ ಸಂಸ್ಥೆಯ ಅಂಗಡಿಯ ಹಿಂಬದಿಯ ಬಾಗಿಲು ಮುರಿದು ಸೊತ್ತುಗಳು ಕಳವಾಗಿದ್ದು ಈ ಸೊತ್ತುಗಳನ್ನು  ಪಿರ್ಯಾದಿದಾರರ ಅಂಗಡಿಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಶ್ರವಣ್ ಎಂಬವನು ಕಳ್ಳತನ ಮಾಡಿರಬಹುದೆಂದು  ಸಂಶಯ ಬಂದಿದ್ದು, ದಿನಾಂಕ: 27-11-2022 ರಂದು ರಾತ್ರಿ 11.00 ಗಮಟೆಯ ಸಮಯ ಪಿರ್ಯಾದಿದಾರರು ತನ್ನ ಸ್ನೇಹಿತ ನವೀನ್ ಎಂಬವರೊಂದಿಗೆ ಮೂಡಬಿದ್ರೆ-ಕೈಕಂಬ ಎಂಬಲ್ಲಿ ಮೋಟಾರ್ ಸೈಕಲ್ ನಲ್ಲಿ ಬರುತ್ತಿರುವಾಗ ಶ್ರವಣ್ ಬರುತ್ತಿದ್ದ ಟ್ಯಾಬ್ಲೋ ವಾಹನವನ್ನು ಕಂಡು ಪಿರ್ಯಾದಿದಾರರು ಈ ವಾಹನವನ್ನು ನಿಲ್ಲಿಸಲು ಹೋದಾಗ ಪಿರ್ಯಾದಿದಾರರನ್ನು ಕಂಡ ಶ್ರವಣ್ ವಾಹನವನ್ನು ನಿಲ್ಲಿಸದೇ ಅತೀವೇಗವಾಗಿ ಚಲಾಯಿಸಿಕೊಂಡು ಹೋಗಿದ್ದು, ಈ ಸಮಯ ಪಿರ್ಯಾದಿದಾರರು ರಸ್ತೆಯ ಮೇಲೆ ಬಿದ್ದಿರುತ್ತಾರೆ, ಇದರಿಂದ ಪಿರ್ಯಾದಿದಾರರಿಗೆ ಶ್ರವಣ್ ನ ಮೇಲೆ ಬಲವಾದ ಸಂಶಯ ಬಂದಿದ್ದು,. ವಿವಿಧ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಇತರ ವಸ್ತುಗಳು ಕಳುವಾಗಿದ್ದು, ಕಳುವಾದ ಸೊತ್ತುಗಳ ಅಂದಾಜು ಮೌಲ್ಯ ಸುಮಾರು 300000/- ರೂ ಆಗಿರುತ್ತದೆ ಎಂಬಿತ್ಯಾದಿಯಾಗಿರುತ್ತದೆ.

Traffic North Police Station           

ಪಿರ್ಯಾದಿ Shreya ದಾರರ ತಂದೆಯಾದ ಸದಾಶಿವ (54) ರವರು ದಿನಾಂಕ: 28-11-2022 ರಂದು ಎಂದಿನಂತೆ ಕೆಲಸ ಮುಗಿಸಿಕೊಂಡು ಸುರತ್ಕಲ್ ಜಂಕ್ಷನ್ ಕಡೆಯಿಂದ ಭಂಟರ ಭವನದ ಕಡೆಗೆ ಸರ್ವೀಸ್ ರಸ್ತೆಯ ಬಲಬದಿಯಲ್ಲಿ ಸಂಜೆ ಸಮಯ ಸುಮಾರು 6:00 ಘಂಟೆಗೆ ನಡೆದುಕೊಂಡು ಹೋಗುತ್ತಾ ಹರ್ಷ ಶೋರೂಂ ಬಳಿ ತಲುಪುತ್ತಿದ್ದಂತೆ ಎದುರಿನಿಂದ ಅಂದರೆ ಸೂರಜ್ ಇಂಟರ್ ನ್ಯಾಷನಲ್ ಹೋಟೆಲ್ ಕಡೆಯಿಂದ KA-19-HB-1697 ನಂಬ್ರದ ಸ್ಕೂಟರನ್ನು ಅದರ ಸವಾರ MOHAMMED AMAN ಎಂಬಾತನು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಡಾಮಾರು ಸರ್ವೀಸ್ ರಸ್ತೆಯ ತೀರಾ ಎಡಬದಿಗೆ ಅಪಾಯಕಾರಿ ರೀತಿಯಲ್ಲಿ ಸವಾರಿ ಮಾಡಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ ತಂದೆಯಾದ ಸದಾಶಿವ ರವರ ಎಡಕೈ ಕೋಲು ಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಸದಾಶಿವ ರವರು ಮತ್ತು ಸ್ಕೂಟರ್ ಸವಾರ ಸ್ಕೂಟರಿನ ಹತೋಟಿ ತಪ್ಪಿ ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದಿದ್ದು ಪರಿಣಾಮ ಸದಾಶಿವ ರವರಿಗೆ ಎಡಕೈ ಕೋಲು ಭಾಗದಲ್ಲಿ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿರುತ್ತದೆ ಹಾಗೂ ಅಪಘಾತ ಪಡಿಸಿದ ಸ್ಕೂಟರ್ ಸವಾರನಿಗೂ ಕೂಡಾ ಗಾಯಗಳಾಗಿದ್ದು ಚಿಕಿತ್ಸೆ ಬಗ್ಗೆ ಸುರತ್ಕಲ್ ಅಥರ್ವ ಆಸ್ಪತ್ರೆಯಲ್ಲಿ ಸದಾಶಿವ ರವರು ಒಳರೋಗಿಯಾಗಿ ದಾಖಲಾಗಿದ್ದು ಸ್ಕೂಟರ್ ಸವಾರ ಹೊರರೋಗಿಯಾಗಿ  ಚಿಕಿತ್ಸೆ ಪಡೆದು ಹೋಗಿರುತ್ತಾರೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 30-11-2022 04:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080