ಅಭಿಪ್ರಾಯ / ಸಲಹೆಗಳು

Crime Reported in: Barke PS

ದಿನಾಂಕ 29-12-2022 ರಂದು  ಪಿರ್ಯಾದಿ Imran K A ಎಂದಿನಂತೆ ತಮ್ಮ ಸಾಯಿಬೀನ್ ನಲ್ಲಿರುವ ಮೊಬೈಲ್ ಲವ್ ಎಂಬ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿರುವ ಸಮಯ ಸುಮಾರು ರಾತ್ರಿ 8-30 ಗಂಟೆಗೆ ಓರ್ವ ಗಿರಾಕಿಯು ಪಿರ್ಯಾದಿದಾರರ ಮೊಬೈಲ್ ಅಂಗಡಿಗೆ ಬಂದು ಮೊಬೈಲ್ ಕವರಿನ ಬಗ್ಗೆ ವಿಚಾರಿಸಿದಾಗ ಪಿರ್ಯಾದಿದಾರರು  ಮೊಬೈಲ್ ಕವರ್ ತೋರಿಸಲು  ಅಂಗಡಿಯ  ಒಳಗೆ  ಹೋದಾಗ ಪಕ್ಕದ ಅಂಗಡಿಯ  ಸಫ್ವಾನ್  ಹಾಗೂ  ಹಬೀಬ್  ರವರು  ಪಿರ್ಯಾದಿದಾರರ ಅಂಗಡಿಯ ಗಿರಾಕಿಯನ್ನು ಅವರ ಅಂಗಡಿಗೆ ಕರೆದುಕೊಂಡು ಹೋಗಿದ್ದನ್ನು ಕಂಡು ಪಿರ್ಯಾದಿದಾರರು ಅವರ ಅಂಗಡಿಯ ಬಳಿ ಹೋಗಿ  ಈ ಬಗ್ಗೆ ಕೇಳಿದಾಗ ಸಫ್ಫಾನನು ಏಕಾಏಕಿಯಾಗಿ ಪಿರ್ಯಾದಿದಾರರನ್ನುತಳ್ಳಿ ಕೈಯಿಂದ  ತನ್ನ ಮುಷ್ಟಿ ಕಟ್ಟಿ ಕೆನ್ನೆಗೆ ಹೊಡೆದನು. ಅಷ್ಟರಲ್ಲಿ  ಅಲ್ಲಿದ್ದ  ಹಬೀಬ್  ಮತ್ತು ಸಪ್ವಾನನ  ತಂದೆ ಪಿರ್ಯಾದಿಯ ಬೆನ್ನಿಗೆ ಕೈಗಳಿಂದ ಹೊಡೆದು ಅಲ್ಲದೆ ಬೈದು ಬೆದರಿಕೆ ಹಾಕಿರುತ್ತಾರೆ..  ಪಿರ್ಯಾದಿಗೆ ನೋವು ಕಾಣಿಸಿರುವುದರಿಂದ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಪಿರ್ಯಾದಿದಾರರನ್ನು ತಡೆದು, ಕೈಯಿಂದ ಹಲ್ಲೆ ಮಾಡಿ, ಅವಾಚ್ಯ ಶಬ್ಚಗಳಿಂದ  ಬೈದು , ಬೆದರಿಕೆ ಹಾಕಿದ ಸಪ್ವಾನ್ , ಹಬೀಬ್  ಹಾಗೂ ಸಫ್ಪಾನ್ ನ ತಂದೆಯ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕಾಗಿ ಎಂಬಿತ್ಯಾದಿಯಾಗಿರುತ್ತದೆ.

 

 

 

 

Crime Reported in: Barke PS

ಪಿರ್ಯಾದಿ  ಸಯ್ಯದ್ ಮೊಹಮ್ಮದ್ ಸಪ್ವಾನ್ ರವರು ಸಾಯಿಬಿನ್ ಕಾಂಪ್ಲೇಕ್ಸ್ ನಲ್ಲಿ ಮೊಬೈಲ್ ಕೇರ್ ಎಂಬ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದು, ಪಿರ್ಯಾದಿದಾರರಿಗೆ Sayyed Mohammed Safwan ಮತ್ತು ಪಿರ್ಯಾದಿ ತಂದೆ ಸೈಯ್ಯದ್ ಹಾಗೂ ಹಬೀಬ್ ಎಂಬುವರಿಗೆ ದಿನಾಂಕ: 29-12-2022 ರಂದು ರಾತ್ರಿ 7-30 ಗಂಟೆಯಿಂದ 08-00 ಗಂಟೆಯ ಮಧ್ಯೆ ಆರೋಪಿತರಾದ ಇಮ್ರಾನ್, ಅನ್ಸಾರ್ ಮತ್ತು ಜಾಬೀರ್ ಎಂಬುವರು ಪಿರ್ಯಾದಿದಾರರ ಅಂಗಡಿಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿ, ಆರೋಪಿತರು ಹಲ್ಲೆ ಮಾಡಿ ಪಿರ್ಯಾದಿದಾರರ ಹಾಗೂ ಅವರ ಅಂಗಡಿಯಲ್ಲಿ ಕೆಲಸ ಮಾಡುವ ಹಬೀಬ್ ಎಂಬುವರ ಕೈಗೆ ಹಾಗೂ ಕಾಲುಗಳಿಗೆ ಕೈಯಿಂದ ಮತ್ತು ಕಾಲಿನಿಂದ ಹೊಡೆದು ಹಲ್ಲೆ ನಡೆಸಿ ಗಾಯಗೊಳಿಸಿದ್ದು ಪಿರ್ಯಾದಿದಾರರು ಹಾಗೂ ಹಬೀಬ್ ಎಂಬುವರು ಜಿಲ್ಲಾ ವೆನ್ ಆಸ್ಪತ್ರೆಯಲ್ಲಿ ಈ ದಿನ ದಿನಾಂಕ: 30-12-2022 ರಂದು ಚಿಕಿತ್ಸೆ ಪಡೆದು ಈ ದಿನ ದೂರು ನೀಡಿ ಹಲ್ಲೆ ಮಾಡಿದಂತಹ  ಇಮ್ರಾನ್, ಅನ್ಸಾರ್ ಮತ್ತು ಜಾಬೀರ್ ಎಂಬುವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬಿತ್ಯಾದಿ

 

 

Mangalore Rural PS

ಪಿರ್ಯಾದಿ SMT HEMALATHA RAGHU SALIYAN ಸುಮಾರು 08 ವರ್ಷಗಳಿಂದ ಮಂಗಳೂರು ಮಹಾನಗರ ಪಾಲಿಕೆಯ 20 ತಿರುವೈಲು ವಾರ್ಡಿನ ಕಾರ್ಪೋರೇಟರ್ ಆಗಿದ್ದುಕೊಂಡು ಊರಿನ ಅಭಿವೃದ್ಧಿ ಕೆಲಸಗಳನ್ನು ತನ್ನ ಗಂಡ ರಘು ಸಾಲ್ಯಾನ್ ರವರು ಮಾಡಿಸುತ್ತಿದ್ದು, ಈ ಕಾಮಗಾರಿಗಳನ್ನು ನಡೆಸುತ್ತಿರುವಾಗ ತೊಯಿಪಕಲ್ಲು ನಿವಾಸಿ ಬಿಪಿನ್ ಜೋಗಿ ಎಂಬವರು ಕ್ಷುಲ್ಲಕ ಕಾರಣಕ್ಕೆ ಪಿರ್ಯಾದಿದಾರರ ಗಂಡನು ಮೋಟಾರು ಸೈಕಲಿನಲ್ಲಿ ಹೋಗುವ ಸಮಯ ಅಡ್ಡಗಟ್ಟಿ ಬೆದರಿಕೆ ಹಾಕಿದ್ದು, ದಿನಾಂಕ: 27-12-2022 ರಂದು ರಾತ್ರಿ ಸುಮಾರು 9-30 ಗಂಟೆಗೆ ಪಿರ್ಯಾದಿದಾರರ ಗಂಡ ಮಂಗಳೂರು ತಾಲೂಕು ತಿರುವೈಲು ಗ್ರಾಮದ ಪಿ.ಎಫ್ ವಸತಿ ಗೃಹದ ಮುಂಭಾಗದಲ್ಲಿರುವ ರಸ್ತೆಯಲ್ಲಿ ಮೋಟಾರು ಸೈಕಲಿನಲ್ಲಿ ಹೋಗುತ್ತಿದ್ದಾಗ ಬಿಪಿನ್ ಜೋಗಿಯವರು ಅವರ ಬಾಬ್ತು ಕೆಎ-19-ಎಂಕೆ-0854 ನಂಬ್ರದ ಕಾರಿನಲ್ಲಿ ಪಿರ್ಯಾದಿದಾರರ ಗಂಡನನ್ನು ಅಡ್ಡಗಟ್ಟಿ ಕೈಯಲ್ಲಿ ತಲವಾರು ಹಿಡಿದುಕೊಂಡು ತುಳು ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದಾಗ ಅಲ್ಲಿ ಸಾರ್ವಜನಿಕರು ಸೇರುವುದನ್ನು ಕಂಡ ಬಿಪಿನ್ ಜೋಗಿಯವರು ಪಿರ್ಯಾದಿದಾರರನ್ನುದ್ಧೇಶಿಸಿ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಒಡ್ಡಿ ಅಲ್ಲಿಂದ ಹೋಗಿರುವುದು ಎಂಬಿತ್ಯಾದಿ.

 

Crime Reported in:Mangalore East Traffic PS                             

 ದಿನಾಂಕ: 29-12-2022 ರಂದು ಪಿರ್ಯಾದಿ ಅಖಿಲ್ ಮ್ಯಾಥ್ಯೊ ರವರು ಎಸ್ ಸಿ ಎಸ್ ಆಸ್ಪತ್ರೆಯಲ್ಲಿರುವ ಕ್ಯಾಂಟಿನ ಕಡೆಗೆ ತನ್ನ ಬಾಬ್ತು KL-78-A-8056 ನೊಂದಣಿ ನಂಬ್ರದ ರಾಯಲ್ ಎನ್ ಫಿಲ್ಡ್ ಮೊಟರ್ ಸೈಕಲನ್ನು ಸವಾರಿ ಮಾಡುತ್ತಾ ಅಥೆನಾ ಆಸ್ಪತ್ರೆ ಎದುರುಗಡೆ ರಸ್ತೆಯಿಂದ ಶಾಂತಿ ನಿಕೇತನವಾಗಿ ಬಲ್ಮಠ ಜಂಕ್ಷನ್ ಗೆ ರಾತ್ರಿ ಸಮಯ ಸುಮಾರು 11:45 ಗಂಟೆಗೆ ಬಂದು ತಲುಪುತ್ತಿದಂತೆ ಡಾ: ಬಿ ಆರ್ ಅಂಬೆಡ್ಕರ್ ಸರ್ಕಲ್ ಜ್ಯೋತಿ ಕಡೆಯಿಂದ ಬಲ್ಮಠ ಕಡೆಗೆ KL-60-C-2930 ನೋಂದಣಿ ನಂಬ್ರದ ಇನ್ನೋವಾ ಕಾರನ್ನು ಅದರ ಚಾಲಕ ನಿರ್ಲಕ್ಷತನದಿಂದ ಮಾನವ  ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅಜಾಗರುಕತೆಯಿಂದ ಹಾಗೂ ಅಪಾಯಕಾರಿಯಾಗಿ ಚಾಲನೆ ಮಾಡಿಕೊಂಡು ಬಂದು ಪಿರ್ಯಾದುದಾರರು ಸವಾರಿ ಮಾಡುತ್ತಿದ್ದ ಮೋಟರ್ ಸೈಕಲ್ ಗೆ ಡಿಕ್ಕಿ ಹೋಡೆದ ಪರಿಣಾಮ ಪಿರ್ಯಾದುದಾರರು ರಸ್ತೆ ಮೇಲೆ ಬಿದ್ದಿರುತ್ತಾರೆ ಅಪಘಾತವನ್ನು ಕಂಡು ಸ್ಥಳದಲ್ಲಿ ನೆರೆದೆ ಸಾರ್ವಜನಿಕರು ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಅಪಘಾತ ಪಡಿಸಿದ ಕಾರು ಚಾಲಕ ಅಪಘಾತದ ಬಳಿಕ ತನ್ನ ವಾಹನವನ್ನು ರಸ್ತೆಯಲ್ಲಿ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿದೆ ಎಂಬಿತ್ಯಾದಿ

 

Crime Reported in:Traffic North Police Station                                                     

 

 ಫಿರ್ಯಾದಿ Ashwin Kumar N. ತಾಯಿ ಶ್ರೀಮತಿ ಭವಾನಿರವರು (74 ವರ್ಷ) ಎಂಬವರು ದಿನಾಂಕ 29.12.2022 ರಂದು ಬೆಳಿಗ್ಗೆ ಕೂಳೂರು ಆನಂದ ನಗರ ರಸ್ತೆಯಲ್ಲಿ ಹಾಲು ತರಲು ಹೋಗುತ್ತಾ ಬೆಳಿಗ್ಗೆ ಸುಮಾರು 06:30 ಗಂಟೆಗೆ ಮಂಗಳೂರು ತಾಲೂಕು, ಕೂಳೂರು ಮಾರೂರ್ ಮೆಷಿನ್ ಟೂಲ್ಸ್ ಕಂಪೆನಿ ಬಳಿ ತಲುಪುತ್ತಿದ್ದಂತೆಯೇ ಹಿಂದಿನಿಂದ ಅಂದರೆ ಪಡುಕೋಡಿ ಕಡೆಯಿಂದ ಮೋಟಾರ್ ಸೈಕಲ್ ನಂಬ್ರ KA-19HH-1269 ನೇಯದನ್ನು ಅದರ ಸವಾರ ಕಶ್ಯಪ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಸವಾರಿ ಮಾಡಿಕೊಂಡು ಬಂದು ಭವಾನಿರವರಿಗೆ ಢಿಕ್ಕಿ ಹೊಡೆದ ಪರಿಣಾಮ ಭವಾನಿರವರ ಮೂಳೆ ಮುರಿತದ ಗಾಯವಾಗಿದ್ದು ಗಾಯಾಳು ಭವಾನಿರವರು ಚಿಕಿತ್ಸೆ ಬಗ್ಗೆ ಎ.ಜೆ. ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

 

Crime Reported in:Traffic North Police Station                                                     

ಪಿರ್ಯಾದಿದಾರರ Miprah ತಂದೆ ಕೆ.ಎಂ.ಇಬ್ರಾಹಿಂ ದಿನಾಂಕ 08-12-2022 ರಂದು ಬೆಳಿಗ್ಗೆ KA-19EZ-0928 ನಂಬ್ರದ ಸ್ಕೂಟರಿನಲ್ಲಿ ಟಿಕ್ಕಹಟ್ ಹೊಟೇಲಿನಿಂದ ಚೊಕ್ಕಬೆಟ್ಟು ಕಡೆಗೆ ಕಾಂಕ್ರೀಟ್ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 08:00 ಗಂಟೆಗೆ ಟಿಕ್ಕಾಹಟ್ ಹೊಟೇಲಿನಿಂದ ಸ್ವಲ್ಪ ಮುಂದೆ ಇರುವ Pratham Enclave ಕಟ್ಟಡದ ಎದುರು ಹೋಗುತ್ತಿದ್ದಂತೆ ಎದುರಿನಿಂದ  ಅಂದರೆ ಚೊಕ್ಕಬೆಟ್ಟು ಕಡೆಯಿಂದ ಸುರತ್ಕಲ್ ಕಡೆಗೆ KA-19ME-9077 ನಂಬ್ರದ ಕಾರನ್ನು ಅದರ ಚಾಲಕ ಶಫೀಕ್ ಅಬ್ದುಲ್ ರಫೀಕ್ ಎಂಬಾತನು ಅಪಾಯಕಾರಿ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಕೆ.ಎಂ.ಇಬ್ರಾಹಿಂ ರವರು ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಢಿಕ್ಕಿ ಪಡಿಸಿದ ಪರಿಣಾಮ ಕೆ.ಎಂ.ಇಬ್ರಾಹಿಂ ರವರು ಸ್ಕೂಟರ್ ಸಮೇತ ಕಾಂಕ್ರೀಟ್ ರಸ್ತೆಗೆ ಬಿದ್ದು ಗುದ್ದಿದ ಹಾಗೂ ತರಚಿದ ರೀತಿಯ ಗಾಯವಾಗಿದ್ದು, ಈ ಬಗ್ಗೆ ಕಾನಾದ ಮಿಸ್ಕಿತ್ ಡೇ ಕೇರ್ ಸೆಂಟರಿಗೆ ಹೋಗಿ ಚಿಕಿತ್ಸೆ ಪಡೆದು ಮನೆಗೆ ಬಂದು ವಿಶ್ರಾಂತಿ ಪಡೆದುಕೊಂಡಿರುತ್ತಾರೆ, ಇದಾದ ಸುಮಾರು ಒಂದು ವಾರದ ಬಳಿಕ ಕೆ.ಎಂ.ಇಬ್ರಾಹಿಂ ರವರ ಕಾಲಿಗೆ ಆಗಿದ್ದ ಗಾಯ ದಿನಾಂಕ  16-12-2022 ರಂದು ಉಲ್ಬಣಗೊಂಡು ಗಾಯದಿಂದ ರೇಶಿ(ಪಸ್) ಬರಲು ಆರಂಭಿಸಿದ್ದರಿಂದ ಫಿರ್ಯಾದಿದಾರರು ತನ್ನ ತಂದೆಯನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿಯ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ದಿನಾಂಕ 29.12.2022 ರಂದು ಆಸ್ಪತ್ರೆಯ ಸಿಬ್ಬಂದಿಯವರು ಬಿಲ್ ಪಾವತಿಸುವ ಬಗ್ಗೆ ಫಿರ್ಯಾದಿದಾರರಿಗೆ ತಿಳಿಸಿದ್ದು ಅದರಂತೆ ಫಿರ್ಯಾದಿದಾರರು ಈ ವಿಚಾರವನ್ನು ಅಫಘಾತ ಪಡಿಸಿದ ಕಾರಿನ ಚಾಲಕರಲ್ಲಿ ತಿಳಿಸಿದಲ್ಲಿ ಕಾರಿನ ಚಾಲಕನು ಆಸ್ಪತ್ರೆಯ ವೆಚ್ಚವನ್ನು ಭರಿಸಲು ನಿರಾಕರಿಸಿರುವುದರಿಂದ ದಿನಾಂಕ 29.12.2022 ರಂದು ಅಫಘಾತದ ಬಗ್ಗೆ ವೈದ್ಯರಲ್ಲಿ ಸೂಚನಾ ಪತ್ರವನ್ನು ಕಳುಹಿಸಿ ಕೊಡುವಂತೆ ಕೋರಿಕೊಂಡಿದ್ದು ಅದರಂತೆ ಈ ದಿನ ದಿನಾಂಕ 30.12.2022 ರಂದು ಫಿರ್ಯಾದಿದಾರರು ಅಫಘಾತದ ಬಗ್ಗೆ ಠಾಣೆಗೆ ಬಂದು ತಡವಾಗಿ ಲಿಖಿತ ದೂರು ನೀಡುತ್ತಿರುವುದಾಗಿದೆ ಎಂಬಿತ್ಯಾದಿ.

 

Crime Reported in:Traffic South Police Station            

 

    ಪಿರ್ಯಾದಿ MOHANA MALLI  ಬಾವ ಗಣೇಶ್ ರವರು ದಿನಾಂಕ: 27-12-2022 ರಂದು ಕೆಲಸದ ಬಗ್ಗೆ ಕಣಚೂರು ಆಸ್ಪತ್ರೆಗೆ ಹೋಗಿದ್ದು, ಆ ದಿನ ಸಂಜೆ ಗಣೇಶ್ ರವರಿಗೆ ಫೋನ್ ಕರೆ ಮಾಡಿ ವಿಚಾರಿಸಲಾಗಿ ಅವರು ರಾತ್ರಿ ಪಾಳಿಯ ಡ್ಯೂಟಿ ಇರುವುದಾಗಿ ತಿಳಿಸಿದ್ದು, ಮರು ದಿನ ದಿನಾಂಕ: 28-12-2022 ರಂದು ಸುಮಾರು ಬೆಳಿಗ್ಗೆ 9-30 ಗಂಟೆಗೆ ಪಿರ್ಯಾದಿದಾರರ ತಂಗಿ ವಾಣಿಯು ಗಣೇಶ್ ರವರಿಗೆ ಫೋನ್ ಕರೆ ಮಾಡಿದಾಗ ನಾಟ್ ರಿಚೇಬಲ್ ಎಂದು ಬರುತ್ತಿದ್ದು, ನಂತರ ಕಣಚೂರು ಆಸ್ಪತ್ರೆಯ ಸೆಕ್ಯೂರಿಟಿ ಆಫೀಸರ್ ಗೆ ಫೋನ್ ಕರೆಮಾಡಿ ವಿಚಾರಿಸಲಾಗಿ ಗಣೇಶ್ ರವರು ಸೆಕ್ಯುರಿಟಿ ಕರ್ತವ್ಯಕ್ಕೆ ಬರಲಿಲ್ಲವೆಂದು ತಿಳಿಸಿರುತ್ತಾರೆ. ನಂತರ ದಿನಾಂಕ: 29-12-2022 ರಂದು ಗಣೇಶ್ ರವರನ್ನು ದೇರಳಕಟ್ಟೆ, ಅಸೈಗೋಳಿ, ಕುತ್ತಾರ್ ನಲ್ಲಿ ಹುಡುಕಲಾಗಿ ಅವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ. ದಿನಾಂಕ: 30-12-2022 ರಂದು ಬೆಳಿಗ್ಗೆ ಸಮಯ ಸುಮಾರು 7-20 ಗಂಟೆಗೆ ಉಳ್ಳಾಲ ಪೊಲೀಸ್ ಠಾಣೆಯಿಂದ ಪಿರ್ಯಾದಿದಾರರ ತಂಗಿ ವಾಣಿ ರವರಿಗೆ ಫೋನ್ ಕರೆಮಾಡಿ ಮದನಿ ನಗರದ ಹತ್ತಿರ ಚರಂಡಿಯಲ್ಲಿ ಬಿದ್ದಿದ್ದ ಗಣೇಶ ರವರನ್ನು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿಸಿರುತ್ತಾರೆ. ನಂತರ ಪಿರ್ಯಾದಿದಾರರು ಹಾಗೂ ಅವರ ತಂಗಿ ವಾಣಿ ರವರು ವೆನ್ ಲಾಕ್ ಆಸ್ಪತ್ರೆಗೆ ಹೋಗಿ ಗಣೇಶ್ ರವರ ಬಗ್ಗೆ ವಿಚಾರಿಸಲಾಗಿ ತಲೆಗೆ ಮತ್ತು ಕೈಗೆ ರಕ್ತಗಾಯವಾಗಿದ್ದು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಆದುದರಿಂದ ಪಿರ್ಯಾದಿದಾರರ ಬಾವ ಗಣೇಶ್ ರವರು ದಿನಾಂಕ: 27-12-2022 ರಿಂದ ದಿನಾಂಕ: 30-12-2022 ರ ಬೆಳಿಗ್ಗೆ ಸಮಯ 7-20 ರ ಮಧ್ಯಕಾಲದಲ್ಲಿ ರಸ್ತೆ ಬದಿಯ ಚರಂಡಿಗೆ ಬಿದ್ದು ಮೃತಪಟ್ಟಿದ್ದಾರೋ ಅಥವಾ ಯಾವುದೋ ವಾಹನ ಡಿಕ್ಕಿ ಹೊಡೆದು ಗಾಯವಾಗಿ ಮೃತಪಟ್ಟಿದ್ದಾರೋ ಎಂಬುದು ಪಿರ್ಯಾದಿದಾರರಿಗೆ ತಿಳಿದು ಬಂದಿರುವುದಿಲ್ಲ ಎಂಬಿತ್ಯಾದಿ.

                           

 

 

Crime Reported in:Traffic South Police Station            

ದಿನಾಂಕ 30-12-2022 ರಂದು ಪಿರ್ಯಾದಿದಾರು DINESH ಜಪ್ಪಿನಮೊಗರು ಜಂಕ್ಷನ್ ನಲ್ಲಿರುವ  ಐಯ್ಯಂಗರ್  ಬೇಕರಿ ಹತ್ತಿರ  ನಿಂತುಕೊಂಡಿರುವ  ಸಮಯ ಸ್ಕೂಟರ್  ನಂಬರ್  KA-19-HH-9935  ನೇದರಲ್ಲಿ  ರುಕ್ಸಾನ ಎಂಬವರು ಸವಾರೆಯಾಗಿ ಮತ್ತು   ಪ್ರೀತಿಸಿಂಗ್ ಎಂಬವರನ್ನು  ಸಹಸವಾರೆಯನ್ನಾಗಿ ಕುಳ್ಳಿರಿಸಿಕೊಂಡು ಜಪ್ಪಿನಮೊಗರು ಜಂಕ್ಷನ್ ಬಳಿ ಇರುವ  ಕೈಯಾರೆ  ಗ್ರಾನೈಟ್  ಅಂಗಡಿ ಕಡೆಯಿಂದ ಜಪ್ಪಿನಮೊಗರು ಜಂಕ್ಷನ್  ಕಡೆಗೆ ಸ್ಕೂಟರನ್ನು  ಸವಾರಿ ಮಾರಿಕೊಂಡು ಬಂದು   ಅಲ್ಲಿ  ತೆರೆದ  ರಸ್ತೆಯ  ವಿಭಜಕದ  ಮೂಲಕ  ಮಂಗಳೂರು  ಕಡೆಯಿಂದ  ತಲಪಾಡಿ  ಕಡೆಗೆ   ಹಾದು  ಹೋಗುವ  ರಾಷ್ಟ್ರೀಯ ಹೆದ್ದಾರಿ  66 ರ ಡಾಮಾರು   ರಸ್ತೆಗೆ   ಸ್ಕೂಟರನ್ನು ಯುಟರ್ನ್ ಮಾಡುತ್ತಿರುವ ಸಮಯ  ಸುಮಾರು  ಬೆಳಿಗ್ಗೆ  08;00  ಗಂಟೆಗೆ  ಅದೇ  ರಸ್ತೆಯಲ್ಲಿ  ಅವರ  ಹಿಂದಿನಿಂದ  ಬುಲೆಟ್  ಟ್ಯಾಂಕರ್  ನಂಬ್ರ   TN -28-AJ-4766  ನೇದನ್ನು  ಅದರ   ಚಾಲಕ  ಮಸಣ ಮುತ್ತು  ಎಂಬಾತನು ದುಡುಕುತನ ಹಾಗೂ  ನಿರ್ಲಕ್ಷ್ಯತನದಿಂದ   ಚಲಾಯಿಸಿಕೊಂಡು  ಬಂದು  ಸ್ಕೂಟರಿನ ಹಿಂಬದಿಗೆ ಡಿಕ್ಕಿ ಪಡಿಸಿದ ಪರಿಣಾಮ  ಸ್ಕೂಟರ್ ಸವಾರೆ  ಮತ್ತು  ಸಹಸವಾರರೆಯರಿಬ್ಬರು  ಸ್ಕೂಟರ್  ಸಮೇತ  ಡಾಮಾರು  ರಸ್ತೆಗೆ  ಬಿದ್ದರು. ಈ  ಅಪಘಾತದಿಂದ  ಸ್ಕೂಟರ್  ಸವಾರಳಾದ  ರುಕ್ಸಾನ ಮತ್ತು  ಸಹಸವಾರೆ ಪ್ರೀತಿ ಸಿಂಗ್  ರವರಿಗೆ ಗಂಭೀರ ಸ್ವರೂಪದ ಗಾಯಗಳಾಗಿರುತ್ತದೆ. ಅಲ್ಲಿ ಸೇರಿದ  ಜನರು ಗಾಯಾಳುಗಳನ್ನು ಚಿಕಿತ್ಸೆ  ಬಗ್ಗೆ   ಆಟೋರಿಕ್ಷಾದಲ್ಲಿ ಕರೆದುಕೊಂಡು ಹೋಗಿ ಮಂಗಳೂರು  ಇಂಡಿಯಾನ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ  ಎಂಬಿತ್ಯಾದಿ .

 

 

Crime Reported in:Traffic South Police Station                    

 ದಿನಾಂಕ;30-12-2022 ರಂದು ಪಿರ್ಯಾದಿದಾರರಾದ VIKYATH M ವಿಖ್ಯಾತ್ ಎಂ ರವರು ಅವರ ಬಾಬ್ತು ಮೋಟಾರ್ ಸೈಕಲ್ ನಂಬ್ರ KA-19-HG-6820 ನೇದನ್ನು ಮಂಗಳೂರಿನಿಂದ ಆಡ್ಯಾರ್ ಕಡೆಗೆ ರಾ.ಹೆ-73 ರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಬೆಳಗ್ಗೆ 10:30 ಗಂಟೆಗೆ ಪಡೀಲ್ ನ ರೈಲ್ವೆ ಅಂಡರ್ ಪಾಸ್ ಬಳಿ ತಲುಪಿದಾಗ ಅದೇ ರಸ್ತೆಯಲ್ಲಿ ಪಿರ್ಯಾದಿದಾರರ ಹಿಂದಿನಿಂದ ಆಟೋ ರಿಕ್ಷಾ ನಂಬ್ರ KA-20-A-7104 ನೇದನ್ನು ಅದರ ಚಾಲಕ ಮೊಹಮ್ಮದ್ ಅಜೀಮ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು  ಎದೆ ಮತ್ತು ಹೊಟ್ಟೆಗೆ ಗುದ್ದಿದ ಗಾಯಗಳಾಗಿದ್ದು ಅಪಘಾತ ಪಡಿಸಿದ ಆಟೋ ರಿಕ್ಷಾ ಸಹ ರಸ್ತೆಗೆ ಮಗಚಿ ಬಿದ್ದಿದ್ದು ಅದರ ಚಾಲಕನಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಕೂಡಲೆ ಅಲ್ಲಿ ಸೇರಿದ್ದ ಸಾರ್ವಜನಿಕರು ಆಟೋ ರಿಕ್ಷಾ ಚಾಲಕನನ್ನು ಹಾಗೂ ಪಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ  ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುವುದಾಗಿದೆ, ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 31-12-2022 08:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080