ಅಭಿಪ್ರಾಯ / ಸಲಹೆಗಳು

Crime Reported in : Mangalore West Traffic PS        

ದಿನಾಂಕ 29-10-2022 ರಂದು ಪಿರ್ಯಾದಿ RATI  M ದಾರರ ಮಾವ ಶ್ರೀ ವಾಸುದೇವನ್ (74) ರವರು ಕೋಡಿಕಲ್ ಜೆ ಬಿ ಲೋಬೋ ಕ್ರಾಸ್ ರಸ್ತೆ ಕಡೆಯಿಂದ ಕೋಡಿಕಲ್ ಮಿನಿ ಮಾರ್ಟ್ ಅಂಗಡಿ ಕಡೆಗೆ ರಸ್ತೆ ದಾಟುತ್ತಿದ್ದಾಗ ಸಮಯ ಸುಮಾರು ರಾತ್ರಿ 7.30 ಗಂಟೆಗೆ ಕೋಡಿಕಲ್ ಕ್ರಾಸ್ ಕಡೆಯಿಂದ ಕೋಡಿಕಲ್ ಕಟ್ಟೆ ಕಡೆಗೆ KA-19-EA-3763 ನೇ ಮೋಟಾರ್ ಸೈಕಲ್ ನ್ನು ಅದರ ಸವಾರ ನಿಶಾಂತ್ ರವರು ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷತನದಿಂದ ಹಾಗೂ ಅಜಾಗರೂಕತೆಯಿಂದ ಚಲಾಯಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರ ಮಾವನಿಗೆ ಡಿಕ್ಕಿ ಹೊಡೆದ ಪರಿಣಾಮ ಹಣೆಗೆ ಗುದ್ದಿದ ರಕ್ತಗಾಯ, ಎಡಗಾಲಿನ ಮಣಿಗಂಟು, ಮೊಣಗಂಟು ಬಲಕೈ ಅಂಗೈ ಹಾಗೂ ತೋರು ಬೆರಳಿಗೆ ತರಚಿದ ರಕ್ತಗಾಯವಾಗಿದ್ದು,  ಬಲಗಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು ಅಲ್ಲಿ ಸೇರಿದ ಸಾರ್ವಜನಿಕರು ಹಾಗೂ  ಪಿರ್ಯಾದಿ ಮತ್ತು ಸ್ಥಳದಲ್ಲಿದ್ದ ಪಿರ್ಯಾದಿದಾರರ ಪರಿಚಯದ ಚಂದ್ರ ಪೂಜಾರಿರವರು ಉಪಚರಿಸಿ  ಅಲ್ಲಿಯೇ ಬರುತ್ತಿದ್ದ ಆಟೋ ರಿಕ್ಷಾದಲ್ಲಿ ಗಾಯಗೊಂಡ ಪಿರ್ಯಾದಿದಾರರ ಮಾವ ವಾಸುದೇವನ್ ರವರನ್ನು ಚಿಕಿತ್ಸೆಗೆ ನಗರದ ಎಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈಧ್ಯರು ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ

       

2) ಪಿರ್ಯಾದಿ ANNASON DEVID ದಾರರು ಮಂಗಳೂರು ಎಜೆ ಇನ್ಸ್ಟಿಟ್ಯೂಟ್ ಸಂಸ್ಥೆಯ ಲಕ್ಷ್ಮೀ ಮೆಮೋರಿಯಲ್ ಕಾಲೇಜಿನಲ್ಲಿ ಎರಡನೇ ವರ್ಷದ ನರ್ಸಿಂಗ್ ವಿದ್ಯಾಭ್ಯಾಸವನ್ನು ಮಾಡಿಕೊಂಡಿದ್ದು ದಿನಾಂಕ 30-10-2022 ರಂದು ಕೊಟ್ಟಾರ ಚೌಕಿ ಬಳಿ ಇರುವ ತನ್ನ  ಹಾಸ್ಟೇಲ್ ನಿಂದ ಸ್ನೇಹಿತ  ಆಗಸ್ ಎಡ್ವಿನ್  ಜೋಸೆಫ್ ರವರನ್ನು ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ಬಿಟ್ಟು ಬರಲು ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ  KA19-K-3486   ರಲ್ಲಿ ಸಂಜೆ  ಹಾಸ್ಟೇಲ್ ನಿಂದ ಹೊರಟು ಹೋಗಿದ್ದು ಸ್ನೇಹಿತನನ್ನು ರೈಲ್ವೇ  ನಿಲ್ದಾಣಕ್ಕೆ ಬಿಟ್ಟು ವಾಪಸ್ಸು ಪಿ.ವಿ.ಎಸ್ ಲಾಲ್ ಭಾಗ್ ಮಾರ್ಗವಾಗಿ ಹೋಗುತ್ತಿದ್ದ ಸಮಯ ಸುಮಾರು 5.45  ಗಂಟೆಗೆ ಲಾಲ್ ಭಾಗ್ ಜಂಕ್ಷನ್ ಬಳಿ ಹಿಂದುಗಡೆಯಿಂದ KA19-AA-4838 ನಂಬ್ರದ ಬಸ್ಸನ್ನು ಅದರ ಚಾಲಕನು ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬೈಕಿನ ಹಿಂದುಗಡೆಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದವರನ್ನು ಸ್ವಲ್ಪ ದೂರತನಕ ಬಸ್ಸು ಎಳೆದುಕೊಂಡು ಹೋದ ಪರಿಣಾಮ ಪಿರ್ಯಾದಿದಾರರ ಮೈ ಕೈಗೆ ಚರ್ಮ ಕಿತ್ತು ಹೋದ ರಕ್ತ ಗಾಯವಾಗಿದ್ದಲ್ಲದೇ ಎಡ ಕೈಯಲ್ಲಿ ರಕ್ತ ಬರುವ ಗಾಯವಾಗಿರುತ್ತದೆ. ಗಾಯಾಳು ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ ಎಂಬಿತ್ಯಾದಿ

Traffic North Police Station                               

ಪಿರ್ಯಾದಿ Prabhu Kuberappa Lamani ದಾರರು ದಿನಾಂಕ: 29-10-2022 ರಂದು ಅವರ ಬಾಬ್ತು KA-19-EX-9137 ನಂಬ್ರದ ಸ್ಕೂಟರ್ ನಲ್ಲಿ ಸಂಜೆ ಸುಮಾರು 6:30 ಗಂಟೆಗೆ ಮನೆಯಿಂದ ಜ್ಯೋತಿನಗರಕ್ಕೆ ಹೋಗುತಿದ್ದ ಸಮಯ ಜ್ಯೋತಿ ನಗರದ KPS ಮೊಬೈಲ್ ಶಾಪ್ ನ ಎದುರು ಜ್ಯೋತಿನಗರ ಜಂಕ್ಷನ್ ಕಡೆಯಿಂದ KA-19-AD-3529 ನೇ ಆಟೋರಿಕ್ಷಾವನ್ನು ಅದರ ಚಾಲಕನಾದ ಅಬ್ದುಲ್ ರಜಾಕ್ ಎಂಬವರು  ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸ್ಕೂಟರಿನ ಬಲ ಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ಕಾಂಕ್ರೀಟ್ ರಸ್ತೆಗೆ ಬಿದ್ದು ಮುಂಗೈಗೆ ರಕ್ತಗಾಯ, ಬಲ ಕಾಲು ಮಂಡಿಗೆ ತರಚಿದ ರೀತಿಯ ಗಾಯವಾಗಿ ಕಾವೂರಿನ ಡಾ|| ಆರ್ ದಿಲೀಪ್ ಜನತಾ ಕ್ಲಿನಿಕ್ ನಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಎಂಬಿತ್ಯಾಧಿ.

 

Traffic South Police Station  

ಪಿರ್ಯಾದಿದಾರರಾದ ಸುಕೇಶ್ ಶೆಟ್ಟಿ (35 ವರ್ಷ) ರವರು ನಿನ್ನೆ ದಿನ ದಿನಾಂಕ: 29-10-2022 ರಂದು ಅವರು ಆಟೋರಿಕ್ಷಾ ಬಾಡಿಗೆ ಮುಗಿಸಿಕೊಂಡು ಬಿಕ್ಕನಕಟ್ಟೆ ಕಡೆಯಿಂದ ಅವರ ಮನೆಯಾದ ನೀರು ಮಾರ್ಗ ಕಡೆಗೆ ಅವರ ಬಾಬ್ತು ಆಟೋರಿಕ್ಷಾ ನಂಬ್ರ: KA-19-AA-9483 ನೇದನ್ನು ಚಲಾಯಿಸಿಕೊಂಡು ರಾ.ಹೆ 169 ರಲ್ಲಿ ಬರುತ್ತಿರುವ ಸಮಯ ಸುಮಾರು ರಾತ್ರಿ 10-45 ಗಂಟೆಗೆ ಕುಲಶೇಖರ ಡೈರಿ ಕ್ರಾಸ್ ರೋಡ್ ಕ್ಕಿಂತ ಸ್ವಲ್ಪ ಮುಂದೆ ತಲುಪಿದಾಗ ಪಿರ್ಯಾದಿದಾರರ ಎದುರಿನಿಂದ ಅಂದರೆ ವಾಮಂಜೂರು ಕಡೆಯಿಂದ ಬಿರ್ಕನಕಟ್ಟೆ ಕಡೆಗೆ ಹೋಗುತ್ತಿದ್ದ ದುರ್ಗಾಂಭ ಟೂರಿಸ್ಟ್ ಬಸ್ಸ್ ನಂಬ್ರ: KA-51-B-2473 ನೇದರ ಚಾಲಕ ಶ್ರೀನಿವಾಸ ಎಂಬಾತನು ಬಸ್ಸಿನ ಬಲಭಾಗದ ಲಾಗ್ಯೇಜ್ ಬಾಕ್ಸ್ ಬಾಗಿಲನ್ನು ಹೊರಗೆ ತೆಗೆದಿಟ್ಟುಕೊಂಡು ಬಸ್ಸನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಬಸ್ಸಿನ ಬಲಭಾಗದ ಲಾಗ್ಯೇಜ್ ಬಾಕ್ಸ್ ಡೋರ್ ನ್ನು ಪಿರ್ಯಾದಿದಾರರ ಆಟೋರಿಕ್ಷಾದ ಬಲಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಆಟೋರಿಕ್ಷಾ ರಸ್ತೆ ಎಡಬದಿಗೆ ಮಗುಚಿ ಬಿದ್ದು  ಸಂಕೇತ್ ಶೆಟ್ಟಿ ರವರಿಗೆ ಹೊಟ್ಟೆಗೆ ಗುದ್ದಿದ ಗಾಯ ಹಾಗೂ ಬಲಗೈ ಭುಜಕ್ಕೆ ಗುದ್ದಿದ ರೀತಿಯ ಗಾಯ ಹಾಗೂ ಆಟೋರಿಕ್ಷಾ ಜಖಂಗೊಂಡಿದ್ದು ಚಿಕಿತ್ಸೆ ಬಗ್ಗೆ ಅವರ ಸ್ನೇಹಿತ ಪ್ರಸಾದ್ ರವರು ಅಪಘಾತ ಸ್ಥಳಕ್ಕೆ ಬಂದು ಆಟೋರಿಕ್ಷಾವೊಂದರಲ್ಲಿ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.

2) ಪಿರ್ಯಾದಿ AYSHA ದಾರರು ದಿನಾಂಕ 30-10-2022 ರಂದು ಕೋಟೆಕಾರು ಬೀರಿಯಿಂದ ಕಾಸರಗೋಡಿಗೆ ಹೋಗಲು ಕೋಟೆಕಾರ್ ಜಂಕ್ಷನ್ ಬಳಿ  ಎನ್.ಎಚ 66 ರ ರಸ್ತೆಯನ್ನೂ ದಾಟಿ ತಲಪಾಡಿಯಿಂದ ಮಂಗಳೂರು ಕಡೆಗೆ ಹಾದುಹೋಗುವ ರಸ್ತೆಯನ್ನೂ ದಾಟುತ್ತಿರುವಾಗ ಸಮಯ ಸುಮಾರು ಮಧ್ಯಾಹ್ನ 03-30 ಗಂಟೆಗೆ ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಬೈಕ ನಂಬ್ರ  KA 19 ED 8329 ನೇದರ ಸವಾರ ಹರೀಶ್ ಎಂಬಾತನು ಸಹಸವಾರ ನಾರಾಯಣ ಎಂಬವರನ್ನು  ಕುಳ್ಳಿರಿಸಿಕೊಂಡು ಬೈಕನ್ನು  ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು  ಹೋಗಿ ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ್ದರಿಂದ ಪಿರ್ಯಾದಿದಾರರು ಡಾಂಬಾರು ರಸ್ತೆಗೆ ಬಿದ್ದು ಅವರ ಎಡಬದಿ ಕೆನ್ನೆಗೆ, ಎಡಬದಿ ಸೊಂಟಕ್ಕೆಗಂಭೀರ ಸ್ವರೂಪದ ಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ ಜನರು ಮತ್ತು ಬೈಕ ಸವಾರನೂ ಚಿಕಿತ್ಸೆ ಬಗ್ಗೆ ತೊಕ್ಕುಟ್ಟುವಿನ ನೇತಾಜಿ ಆಸ್ಪತ್ರೆಗೆ ಕರೆದು ಕೊಂಡು ಬಂದಿದ್ದು ಬಳಿಕ  ಅಲ್ಲಿಂದ ಹೆಚ್ಚಿನ   ಚಿಕಿತ್ಸೆಗಾಗಿ ತೇಜಸ್ವಿನಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು ವೈದ್ಯರು ಪರಿಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 31-10-2022 07:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080