ಅಭಿಪ್ರಾಯ / ಸಲಹೆಗಳು

 

Crime Reported in :  Mangalore East Traffic PS               

ಪಿರ್ಯಾದಿ ಸಾಗರ್ ಜಿ ಆಳ್ವ ರವರು ದಿನಾಂಕ 29-12-2022 ರಂದು ಮದ್ಯಾಹ್ನ ಅವರ ಸ್ಕೂಟರ್ ನೊಂದಣಿ ಸಂಖ್ಯೆ: KA-19-HJ-2347 ನೇಯದನ್ನು  ಚಲಾಯಿಸಿಕೊಂಡು ಪಂಪ್ ವೆಲ್ ಮೂಲಕ  ಓಲ್ಡ್ ಕಂಕನಾಡಿ ರಸ್ತೆಯ ಮಾರ್ಗವಾಗಿ ಪಾಂಡೇಶ್ವರದ ಕಡೆಗೆ ಹೋಗುತ್ತಿರುವಾಗ ಸಮಯ ಮಧ್ಯಾಹ್ನ ಸುಮಾರು 12.35 ಗಂಟೆಗೆ ಕಂಕನಾಡಿ ಜಂಕ್ಷನ್ ತಲುಪುತ್ತಿದ್ದಂತೆ ಅಲ್ಲಿದ್ದ ಟ್ರಾಫಿಕ್ ಪೊಲೀಸರು ಪಂಪ್ ವೆಲ್ ಕಡೆಯಿಂದ ಬರುವ ವಾಹನಗಳನ್ನು ನಿಲ್ಲಿಸುವಂತೆ ಸೂಚಿಸಿದ್ದರಿಂದ  ಪಿರ್ಯಾದಿದಾರರು ಸ್ಕೂಟರನ್ನು ನಿಲ್ಲಿಸಿದ್ದು, ಆಗ ಪಿರ್ಯಾದಿದಾರರ ಬಲ ಭಾಗದಲ್ಲಿ ನಿಲ್ಲಿಸಿದ್ದ ಕಾರು ನೊಂದಣಿ ಸಂಖ್ಯೆ: KA-20-MB-0897 ನೇಯದನ್ನು ಅದರ ಚಾಲಕನು ವೆಲೆನ್ಸಿಯಾ ಕಡೆಗೆ ಹೋಗಲೆಂದು ಯಾವುದೇ ಮುನ್ಸೂಚನೆಯನ್ನು ನೀಡದೇ ದುಡುಕತನ, ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ಕಾರನ್ನು ಎಡಕ್ಕೆ ಚಲಾಯಿಸಿದ ಪರಿಣಾಮ  ಕಾರಿನ ಎಡ ಮುಂಭಾಗದ ಚಕ್ರವು ಪಿರ್ಯಾದಿದಾರರ ಬಲ ಕಾಲಿನ ಪಾದದ ಮೇಲೆ ಚಲಿಸಿ ರಕ್ತಗಾಯಗೊಂಡಿದ್ದು ಅಲ್ಲಿದ್ದ ಸಾರ್ವಜನಕರು ಉಪಚರಿಸಿ ಹತ್ತಿರದ ಫಾದ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಪಿರ್ಯಾದಿದಾರರ ಬಲ ಕಾಲಿನ ಪಾದದಲ್ಲಿ ಮೂಳೆ ಮುರಿತ ಉಂಟಾಗಿರುವುದಾಗಿ ತಿಳಿಸಿರುತ್ತಾರೆ, ಅಘಾತಪಡಿಸಿದ ಕಾರು ಚಾಲಕನು ಮುಂದಿನ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸುವುದಾಗಿ ಹೇಳಿ ಆಸ್ಪತ್ರೆಯಿಂದ ಹೋದವರು ವಾಪಸ್ ಸಂಪರ್ಕಿಸಿರುವುದಿಲ್ಲ ಕಾರಣ ಈ ದಿನ ತಡವಾಗಿ ದೂರು ನೀಡುತ್ತಿದ್ದು, ಕಾರು ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೇಳಿಕೊಳ್ಳುತ್ತೇನೆ.

Crime Reported in : Traffic North Police Station                                                             

 

ಪಿರ್ಯಾದಿ  VINISH ರವರು ದಿನಾಂಕ 31-12-2022 ರಂದು ಹೊಸಬೆಟ್ಟುವಿನಲ್ಲಿ ತಮ್ಮ ಕಂಪನಿಯ ಕೆಲಸ ಮುಗಿಸಿಕೊಂಡು ತಮ್ಮ ರೂಂ ಆದ ಕೊಟ್ಟಾರ ಚೌಕಿ ಮಾಲೇಮಾರ್ ಕಡೆಗೆ ರಿಕ್ಷಾದಲ್ಲಿ ಬರುತ್ತಿರುವಾಗ ತಡರಾತ್ರಿ ಸಮಯ ಸುಮಾರು 00.30 ಗಂಟೆಗೆ ಪಣಂಬೂರು ದೀಪಕ್ ಪೆಟ್ರೋಲ್ ಬಂಕ್ ಬಳಿ ತಲುಪುತ್ತಿದಂತೆ ಪಿರ್ಯಾದಿದಾರರ ಎದುರು ದಿಕ್ಕಿನಿಂದ ಅಂದರೆ ಪಣಂಬೂರು ಕಡೆಯಿಂದ ಬೈಕಂಪಾಡಿ ಕಡೆಗೆ ಬಿಳಿ ಬಣ್ಣದ ಕಾರನ್ನು ಅದರ ಚಾಲಕ ಅತೀ ವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಕಾರಿನ ಎದುರುನಿಂದ ಹೋಗುತ್ತಿದ್ದ KA-19-HC-5651 ನಂಬ್ರದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿ ಕಾರನ್ನು ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಬೈಕಂಪಾಡಿ ಕಡೆಗೆ ಹೋಗಿರುತ್ತಾರೆ, ಈ ಅಪಘಾತದಿಂದ ದ್ವಿಚಕ್ರ ವಾಹನ ಸವಾರನು ಡಾಮಾರು ರಸ್ತೆಗೆ ಬಿದ್ದು, ಅವರ ತೆಲೆಗೆ ಗಂಭೀರ ಸ್ವರೂಪದ ಗಾಯ ಹಾಗೂ ಬಲಕಾಲಿಗೆ, ಕೈಬೆರಳಿಗೆ ತರಚಿದ ಗಾಯಗಳಾಗಿದ್ದು ರಿಕ್ಷಾದಲ್ಲಿ ತೆರಳುತ್ತಿದ್ದ ಪಿರ್ಯಾದಿದಾರರು ಈ ಅಪಘಾತವನ್ನು ನೋಡಿ ದ್ವಿಚಕ್ರ ವಾಹನ ಸವಾರನನ್ನು ಚಿಕಿತ್ಸೆಯ ಬಗ್ಗೆ ಎ ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಲ್ಲಿ ತೋರಿಸಿದ್ದು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ.

                             

Crime Reported in : Traffic North Police Station

ಪಿರ್ಯಾದಿ ಅಬ್ದುಲ್ ಲತೀಫ್ ರವರು ದಿನಾಂಕ: 31-12-2022 ರಂದು ಅವರ ಬಾಬ್ತು KA-19-EH-6644 ನಂಬರ್ ಮೋಟಾರ್ ಸೈಕಲಿನಲ್ಲಿ ಶಾಂತವ್ವ ಎಂಬುವರನ್ನು ಸಹ ಸವಾರೆಯಾಗಿ ಕುಳ್ಳಿರಿಸಿಕೊಂಡು ರಾಹೆ 66ರ ಉಡುಪಿ-ಮಂಗಳೂರು ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಬರುತ್ತಾ ಬೆಳಿಗ್ಗೆ ಸಮಯ 8:30 ಘಂಟೆಗೆ ಕೂಳೂರಿನ ರಿಲಾಯನ್ಸ್ ಪೆಟ್ರೋಲ್ ಪಂಪ್ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲಿನ ಎಡಬದಿಯ ಇಂಡೀಕೇಟರ್ ಹಾಕಿ ಎಡಕ್ಕೆ ತಿರುಗಿಸುತ್ತಿದ್ದಂತೆ ಕೂಳೂರು ಕಡೆಯಿಂದ ಸರ್ವೀಸ್ ರಸ್ತೆಯಲ್ಲಿ KA-19-AC-0633 ನಂಬ್ರದ ಬಸ್ಸನ್ನು ಅದರ ಚಾಲಕ ಕಿರಣ್ ರಾಜ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮತ್ತು ಸಹಸವಾರೆ ಶಾಂತವ್ವ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಸಹಸವಾರೆ ಶಾಂತವ್ವ ರವರ ತಲೆಯ ಬಲ ಭಾಗಕ್ಕೆ ರಕ್ತಗಾಯ, ತಲೆಗೆ ಗುದ್ದಿದ ರೀತಿಯ ಗಾಯ, ಬಲಗೈ ಮೊಣಗಂಟಿನ ಬಳಿ ಮುರಿತದ ಗಾಯ, ಬಲ ಉಬ್ಬಿನ ಬಳಿ ತರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಎಜೆ ಆಸ್ಪತ್ರೆಯಲ್ಲಿ ಶಾಂತವ್ವ ರವರನ್ನು ಒಳರೋಗಿಯಾಗಿ ದಾಖಲಾಗಿದ್ದಾರೆ.

                                       

 

Crime Reported in : Surathkal PS

ಈ ಪ್ರಕರಣದ ಸಾರಾಂಶವೇನಂದರೇ ದಿನಾಂಕ 31-12-2022 ರಂದು ಮಧ್ಯಾಹ್ನ ಸುಮಾರು 2:30 ರಿಂದ 3:30 ರ ಮಧ್ಯಾವದಿಯಲ್ಲಿ ಸತ್ಯಂ 18 ವರ್ಷ ,ಈತನು ತನ್ನ ಗೆಳಯ ಪ್ರಭಾಕರನ್ 19 ವರ್ಷ, ರವರ ಜೊತೆಯಲ್ಲಿ ಸುರತ್ಕಲ್ ಲೈಟ್ ಹೌಸ್ ಬೀಚ್ ಗೆ ಸುಮುದ್ರದಲ್ಲಿ ಸ್ನಾನ ಮಾಡಲು ತೆರಳಿದ್ದು ಹೀಗೆ ಸ್ನಾನ ಮಾಡುತ್ತಿರುವ ವೇಳೆ ಮಧ್ಯಾಹ್ನ 3:20 ರಿಂದ 3:45 ರ ಮಧ್ಯಾವದಿಯಲ್ಲಿ ಸಮುದ್ರದ ಅಲೆಗಳ ಸೆಳತಕ್ಕೆ ಸಿಲುಕಿ ಕಣ್ಮರೆಯಾಗಿರುತ್ತಾನೆ, ಎಂಬುವುದಾಗಿ ಆತನ ತಾಯಿ ಪಿರ್ಯಾದಿದಾರರಾದ ಶ್ರೀಮತಿ ಸೋನಿ ಕುಮಾರಿ ರವರು ಪತ್ತೆ ಮಾಡಿಕೊಡಬೆಕೇಂದು ಕೇಳಿಕೊಂಡಿರುತ್ತಾರೆ.

 

                                  

 

ಇತ್ತೀಚಿನ ನವೀಕರಣ​ : 01-01-2023 04:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080