ಅಭಿಪ್ರಾಯ / ಸಲಹೆಗಳು

Crime Reported in : Barke PS

ಪಿರ್ಯಾದಿದಾರರಾದ ನವೀನ್ ಪ್ರಾಯ 43 ವರ್ಷ ರವರ ಮೊದಲನೇ ಮಗಳಾದ ಪ್ರಿಯದರ್ಶಿನಿ ಪ್ರಾಯ 22 ವರ್ಷ ಮೊದಲನೇ ವರ್ಷದ ಬಿ.ಎ ವಿದ್ಯಾಭ್ಯಾಸ ಮಾಡುತ್ತಿದ್ದು ದಿನಾಂಕ:26.07.2022 ರಂದು ಪಿರ್ಯಾದಿದಾರರು ಮತ್ತು ಪತ್ನಿ ಪ್ರತೀಮಾರವರು ಎಂದಿನಂತೆ ಬೆಳಗ್ಗೆ 7:00 ಗಂಟೆಗೆ  ಕೆಲಸಕ್ಕೆ ಹೋಗಿದ್ದು ಪಿರ್ಯಾದಾರರ ಮಗಳು ಮನೆಯಲ್ಲಿಯೇ ಇದ್ದು ಸಂಜೆ ಕೆಲಸ ಮುಗಿಸಿ ವಾಪಾಸು ಮನೆಗೆ ಬಂದಾಗ ಪ್ರಯದರ್ಶಿನಿ ಮನೆಯಲ್ಲಿರದೇ ಇದ್ದು ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸದೇ ಇದ್ದುದ್ದನ್ನು ಕಂಡು ಸಂಶಯಗೊಂಡು ಪಿರ್ಯಾದಿದಾರರ ಸಂಬಂಧಿಕರಲ್ಲಿ ಮಗಳ ಬಗ್ಗೆ ವಿಚಾರಿಸಿದಾಗ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ” ಆದುದರಿಂದ ಕಾಣೆಯಾದ ಪಿರ್ಯಾದಿದಾರರ ಮಗಳು ಪ್ರಿಯದರ್ಶಿನಿ ಎಂಬಾಕೆಯನ್ನು ಪತ್ತೆ ಹಚ್ಚಿ ಕೊಡಬೇಕು ಎಂಬಿತ್ಯಾದಿ ಸಾರಾಂಶ. 

ಕಾಣೆಯಾದ ಹುಡುಗಿಯ ಚಹರೆ ವಿವರ

ಹೆಸರು ಪ್ರಿಯಾದರ್ಶಿನಿ ಪ್ರಾಯ 22 ವರ್ಷ, ಎತ್ತರ 4.5 ಅಡಿ, ಕೋಲು ಮುಖ, ಕಪ್ಪು ಮೈಬಣ್ಣ, ಸಪೂರ ಶರೀರ

Crime Reported in : Mangalore East Traffic PS

 ಪಿರ್ಯಾದಿದಾರರಾದ ರೆ.ಫಾ. ರೋನ್ಸನ್ ಪಿಂಟೋ ರವರಿಗೆ ದಿನಾಂಕ 26-07-2022 ರಂದು ಬೆಳಿಗ್ಗೆ 10.05 ಗಂಟೆಗೆ ವ್ಯಕ್ತಿಯೊಬ್ಬರು ಫೋನ್ ಕರೆ ಮಾಡಿ ಫಾ.ಪೀಟರ್ ಫೆರ್ನಾಂಡಿಸ್ ರವರಿಗೆ ಅಪಘಾತವಾಗಿ, ಎಸ್.ಸಿ.ಎಸ್. ಆಸ್ಪತ್ರೆಗೆ ಹೋಗುತ್ತಿರುವುದಾಗಿ ತಿಳಿಸಿದ್ದು, ಪಿರ್ಯಾದಿದಾರರು ಆಸ್ಪತ್ರೆಗೆ ತೆರಳಿ  ವಿಚಾರಿಸಿದಾಗ, ಫಾ.ಪೀಟರ್ ಫೆರ್ನಾಂಡಿಸ್ ರವರು ಈ ದಿನ ಬೆಳಿಗ್ಗೆ 10.00 ಗಂಟೆಗೆ ತನ್ನ ಬಾಬ್ತು ನೊಂದಣಿ ಸಂಖ್ಯೆ CNO 1452 ಸ್ಕೂಟರನ್ನು ಚಲಾಯಿಸಿಕೊಂಡು ಕೆ.ಪಿ.ಟಿ ಜಂಕ್ಷನ್ ಕಡೆಯಿಂದ ಪದವು ಜಂಕ್ಷನ್ ಕಡೆಗೆ ಇರುವ NH 66 ನೇಯದರಲ್ಲಿ ಹೋಗುತ್ತಿರುವಾಗ ನೊಂದಣಿ ಸಂಖ್ಯೆ KA-19-Z-6652  ಕಾರನ್ನು ಅದರ ಚಾಲಕಿ ಸೆವ್ರಿನ್ ಲೋಬೊ ಎಂಬುವರು ದುಡುಕುತನದಿಂದ ಚಲಾಯಿಸಿಕೊಂಡು ಬಂದು  ಸ್ಕೂಟರನ್ನು ಎಡಗಡೆಯಿಂದ ಓವರ್ ಟೇಕ್ ಮಾಡುವ ವೇಳೆ ಕಾರಿನ ಬಲ ಬದಿಯ ಸೈಡ್ ಮಿರರ್ ಸ್ಕೂಟರ್ ಸವಾರರಿಗೆ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರರು ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು, ಎರಡೂ ಮುಂಗೈಗಳಲ್ಲಿ ತರಚಿದ ಗಾಯಗಳಾಗಿ ಎಸ್.ಸಿ.ಎಸ್. ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಆದುದರಿಂದ ಅಪಘಾತಪಡಿಸಿದ ಕಾರು ಚಾಲಕಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವರೇ ವಿನಂತಿ ಎಂಬಿತ್ಯಾದಿ.

Crime Reported in : Traffic North Police Station   

ಪಿರ್ಯಾದಿದಾರರು Mallappa  ದಿನಾಂಕ: 24-07-2022 ರಂದು ತನ್ನ ಬಾಬ್ತು KA-19-HA-5211 ನಂಬ್ರದ ಮೋಟಾರ್ ಸೈಕಲಿನಲ್ಲಿ ಕಾವೂರು ಕಡೆಯಿಂದ ಬೊಂದೆಲ್ ಕಡೆಗೆ ಹೋಗುತ್ತಿದ್ದಾಗ ಮಧ್ಯಾಹ್ನ  ಸಮಯ 12:00 ಗಂಟೆಗೆ ಕಾವೂರು ಜಂಕ್ಷನಿನ  ಅರಮನೆ ಸ್ವೀಟ್ ದಾಟಿ ಸ್ವಲ್ಪ ಮುಂದೆ ಹೋಗುತ್ತಿದ್ದಾಗ ರಸ್ತೆಯ ಬದಿಯಲ್ಲಿ ಬೊಂದೆಲ್ ಕಡೆಗೆ ಮುಖ ಮಾಡಿ ನಿಲ್ಲಿಸಿದ್ದ KA-19-MC-2479 ನಂಬ್ರದ ಕಾರಿನ ಚಾಲಕಿಯು ಒಮ್ಮೆಲೇ ನಿರ್ಲಕ್ಷ್ಯತನದಿಂದ ಬಾಗಿಲು ತೆರೆದ ಪರಿಣಾಮ ಪಿರ್ಯಾದಿದಾರರ ಮೋಟಾರ್ ಸೈಕಲಿಗೆ ಬಾಗಿಲು ಡಿಕ್ಕಿಯಾಗಿ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಎಡಕೈ ಮಧ್ಯದ ಬೆರಳು ಮುರಿದಿದ್ದು ಹಾಗೂ ಬಲಕೈ ಭುಜಕ್ಕೆ ಬಲವಾದ ಗುದ್ದಿದ ರೀತಿಯ ಗಾಯವಾಗಿ KMC ಅತ್ತಾವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಎಂಬಿತ್ಯಾದಿ.

 

Crime Reported in : Surathkal PS

 ಸೈಬರ್ ಟಿಪ್ ಪೋರ್ಟಲ್ ಮುನೇನ ಕಳುಹಿಸಿಕೊಟ್ಟಿರುವ ಅರ್ಜಿಯನ್ನು ದಿನಾಂಕ: 26/07/2022 ರಂದು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಸ್ವೀಕರಿಸಿ ಸದ್ರಿ ವರದಿ ಹಾಗೂ ಸಿಡಿಯನ್ನು ಪರಿಶೀಲಿಸಲಾಗಿ chithinjangmail.corn ನ ಇ-ಮೇಲ್ ನ ಗೂಗಲ್ ಫೋಟೋ ಮತ್ತು ಫೇಸ್ ಬುಕ್ ಖಾತೆಯಲ್ಲಿ ದಿನಾಂಕ: 30/01/2021 ರಂದು ಅರೋಪಿತ ಮಗುವಿನ ಶೀಲತೆಯ ವೀಡಿಯೋವನ್ನು ಚಿತ್ತರಂಜನ್ ಶೆಟ್ಟಿ  ಸುರತ್ಕಲ್ ಮಂಗಳೂರು ನು ಸೆಂಡ್ ಮಾಡಿರುವ ಮಾಹಿತಿ ಇರುತ್ತದೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಮಗುವಿನ ಅಶ್ಲೀಲತೆಯ ವೀಡಿಯೋ ಆರೋಪಿಯ ಮೊಬೈಲ್ ನಂಬ್ರ ಇಮೇಲ್ ಐಡಿ ಇತರ ಮಾಹಿತಿಗಳನ್ನು ಒಳಗೊಂಡಿರುವುದು ಕಂಡುಬಂದುದರಿಂದ ಆರೋಪಿಯ ವಿರುದ್ಧ ಸ್ವಯಂಪ್ರೇರಿತನಾಗಿ ದೂರು ನೀಡುತ್ತಿರುವುದು ಎಂಬಿತ್ಯಾದಿಯಾಗಿದೆ

 

Crime Reported in : Bajpe PS

 ಪಿರ್ಯಾದಿದಾರ P M Shareef  ಅಣ್ಣ ಬಾಮಿ ಶಾಲೆಯಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದು . ದಿನಾಂಕ 23.07.2022 ರಂದು ಬೆಳಗ್ಗೆ ಸುಮಾರು 8.15 ಗಂಟೆಗೆ ಪಿರ್ಯಾದಿದಾರರಿಗೆ ಪರಿಚಯವಿರುವ ಮಹಮ್ಮದ್ ಇಕ್ಬಾಲ್ ಎಂಬುವರು ಪೋನ್ ಕರೆ ಮಾಡಿ ನಿಮ್ಮ ಅಣ್ಣನಿಗೆ ಮಂಗಳೂರು ತಾಲೂಕು ಕಂದಾವರ ಗ್ರಾಮದ ಕೈಕಂಬದ ಮಸೀದಿಯಿಂದ ಸ್ವಲ್ಪ ಮುಂದೆ ಮಳಲಿ ರಸ್ತೆಯಲ್ಲಿ ಬುಲೆಟ್ ಬೈಕ್ ಡಿಕ್ಕಿಯಾಗಿ ಗಾಯಗೊಂಡ ಬಗ್ಗೆ ತಿಳಿಸಿದ್ದು ನಂತರ ಬುಲೆಟ್ ಬೈಕ್ ನ ಸವಾರನು ಬೈಕ್ ನಿಲ್ಲಿಸದೇ ತೆರಳಿದ್ದು ಪಿರ್ಯಾದಿದಾರರ ಅಣ್ಣನನ್ನು ಚಿಕಿತ್ಸೆಗಾಗಿ ಫಾದರ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಹಾಗೂ  ಸದ್ರಿ ಬೈಕ್ ನಂಬ್ರ ನೋಡಲಾಗಿದ್ದು KA19EZ6917 ಆಗಿರುತ್ತದೆ ಎಂಬಿತ್ಯಾದಿ

2) ಪಿರ್ಯಾದುದಾರರು Dombayya Poojary ದಿನಾಂಕ 26-07-2022 ರಂದು ಸಂಜೆ ಸುಮಾರು 6-15 ಗಂಟೆಗೆ ಮುಚ್ಚೂರು ಕಲ್ಲಿನ ಕೊರೆಯಲ್ಲಿ ಕೆಲಸ ಮುಗಿಸಿ ತನ್ನ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಪರಮೇಶ್ವರ ಎಂಬುವವರ ಬಾಬ್ತು ಕೆ ಎ 19 ಇ ಎಲ್ 2824 ನೇಯ ದ್ವಿಚಕ್ರ ವಾಹನದಲ್ಲಿ ಸಹಸವಾರರಾಗಿ  ಮನೆ ಕಡೆ ಹೋಗುವವರೇ ಕೈಕಂಬ ಮಂಗಳೂರು ರಾಷ್ಟೀಯ ಹೆದ್ದಾರಿಯಲ್ಲಿ ಬರುತ್ತೀರುವಾಗ ಸಮಯ ಸುಮಾರು 6-45 ಗಂಟೆಗೆ ಮೂಳೂರು ಗ್ರಾಮದ ರೋಜಾ ಮಿಸ್ತಿಕಾ  ಶಾಲೆಯ ಬಳಿ ತಲುಪುತ್ತಿದ್ದಂತೆ ಎದುರಿನಿಂದ ಅಂದರೆ ಗುರುಪುರ ಕಡೆಯಿಂದ ಕೈಕಂಬ ಕಡೆಗೆ ಕೆ ಎ 19 ಇ ಡಿ 2817 ನೇಯ ನೊಂದಣಿ ಸಂಖ್ಯೆಯ ಮೋಟಾರ ಸೈಕಲ್ ನ್ನು ಒಬ್ಬ ಸವಾರನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರು ಸಹಸವಾರರಾಗಿ ಹೊಗುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಮೋಟಾರ್ ಸೈಕಲ್ ಸವಾರ ಪರಮೇಶ್ವರ ರವರು ಬೈಕ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಬಲಗಾಲಿನ ಹಿಮ್ಮಡಿ, ಬಲಗಾಲಿನ ತೊಡೆ ಮತ್ತು ಎಡಗಾಲಿನ ಪಾದಕ್ಕೆ ರಕ್ತಗಾಯವಾಗಿದ್ದು ಪರಮೇಶ್ವರರ ತಲೆಗೆ ಗಂಭೀರ ರಕ್ತ ಗಾಯವಾಗಿರತ್ತದೆ.ಹಾಗೂ  ಅವರಿಗೆ ಡಿಕ್ಕಿ ಪಡಿಸಿದ ಮೋಟಾರ ಸೈಕಲ್ ಸವಾರ ಹಾಗೂ ಸಹ ಸವಾರರೂ ಕೂಡ ರಸ್ತೆಗೆ ಬಿದ್ದು ಗಾಯಗೊಂಡಿರುತ್ತಾರೆ.ನಂತರ ಅಲ್ಲಿ ಸೇರಿದ್ದ ಜನರು ಅವರನ್ನು ಉಪಚರಿಸಿ ಗಾಯಗೊಂಡ ಮೂರು ಜನರನ್ನು ಆ್ಯಂಬ್ಯೂಲೇನ್ಸ್ ಒಂದರಲ್ಲಿ ಮಂಗಳೂರು ಸಿಟಿ ಆಸ್ಪತ್ರೆಗೆ ಚಿಕಿತ್ಸೆ ಗೆ ಕರೆದುಕೊಂಡು ಬಂದಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಪರಮೇಶ್ವರರವರು ಮೃತ ಪಟ್ಟಿರುವುದಾಗಿ ತಿಳಿಸಿದ್ದು, ಪಿರ್ಯಾದುದಾರರನ್ನು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಹಾಗೂ ಡಿಕ್ಕಿ ಪಡಿಸಿದ ಮೋಟಾರ್ ಸೈಕಲ್ ಸವಾರರನೂ  ಕೂಡ ಚಿಕಿತ್ಸೆ ಬಗ್ಗೆ ಸದ್ರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 27-07-2022 05:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080