ಅಭಿಪ್ರಾಯ / ಸಲಹೆಗಳು

1.CRIME REPORTED IN URWA PS
ದಿನಾಂಕ 22-05-2021 ರಂದು ಬೆಳಿಗ್ಗೆ 10-20 ಗಂಟೆಯಿಂದ 11-00 ಗಂಟೆಗೆ ಮಂಗಳೂರು ಉರ್ವಾ ಠಾಣಾ
ವ್ಯಾಪ್ತಿಯ ಸರ್ಕೂಟ್ ಹೌಸ್ ಜಂಕ್ಷನ್ ನಲ್ಲಿರುವ ತಾತ್ಕಾಲಿಕವಾಗಿ ನಿರ್ಮಿಸಿದ ಚಕ್ ಪೋಸ್ಟ್ ನಲ್ಲಿ
ಮೇಲಾಧಿಕಾರಿಗಳ ಮೌಖಿಕ ಅದೇಶದಂತೆ ಸದ್ರಿ ಚಕ್ ಪೋಸ್ಟ್ ನಲ್ಲಿ ಪೂರ್ವ ಠಾಣಾ ಸಿಬ್ಬಂದಿಯವರಾದ
ಎ.ಎಸ್.ಐ ಸಂತೋಷ್, ಹೆಚ್.ಸಿ. ಬಾಪುಗೌಡ, ಹೆಚ್.ಸಿ. ಜಯಾನಂದ, ಪಿ.ಸಿ. ಅನ್ವರ್, ಪಿ.ಸಿ. ಚೇತನ್
ಉರ್ವಾ ಪೊಲೀಸ್ ಠಾಣಾ ಸಿಬ್ಬಂದಿಯವರಾದ ಹೆಚ್.ಸಿ. ಸಿದ್ದಾರ್ಥ, ಹೆಚ್.ಸಿ. ಪುಷ್ಪರಾಜ್, ಹೆಚ್.ಸಿ ಪ್ರಮೋದ್,
ಹೆಚ್.ಸಿ ಕರುಣೇಶ್, ಹಾಗೂ ಸಂಚಾರ ಪೂರ್ವ ಪೊಲೀಸ್ ಠಾಣಾ ಸಿಬ್ಬಂದಿಯವರಾದ ಎ.ಎಸ್.ಐ ಲಕ್ಷ್ಮಣ ಬಿಲ್ಲವ,
ಹೆಚ್.ಸಿ. ಕೇಶವ ಮೂರ್ತಿ, ಪಿ.ಸಿ. ಮಲ್ಲಿಕಾಜನ್ ಪಿ.ಸಿ. ಹನುಮಂತಪ್ಪ, ಹೋಮ್ ಗಾರ್ಡ್ ಮಹೇಶ್ ಮತ್ತು
ಮಹಿಳಾ ಹೋಮ್ ಗಾರ್ಡ್ ನಂ. ಜೆನ್ನಿಫರ್ ರವರುಗಳು ಕರ್ತವ್ಯ ನಿರ್ವಹಿಸಿಕೊಂಡು ವಾಹನ ತಪಾಸಣೆ
ಮಾಡುತ್ತಿದ್ದಾಗ ಬಿಜೈ ಬಟ್ಟಗುಡ್ಡೆ ಮೂಲಕ ಕೆ.ಪಿ.ಟಿ. ಕಡೆಗೆ ಚಲಾವಣೆ ಮಾಡಿಕೊಂಡು ಹೋಗುತ್ತಿದ್ದ KA-19
MG-0399 ಮಾರುತಿ ರಿಟ್ಜ್ ಕಾರು ,KA-19 EC-9248 ಅಕ್ಟೀವಾ ಸ್ಕೂಟರ್ , KA-19 HB-6670 ಟಿ.ವಿ.ಎಸ್.
ಸ್ಕೂಟರ್, KA-04 C-6758 ಮಾರುತಿ ಓಮ್ನಿ, KA-22 T/R-9258 ಬೊಲೆರೋ ಜೀಪು ( ನೊಂದಣಿ
ಆಗಿರುವುದಿಲ್ಲ) ,KA-19 EF-0502 ಕೆ.ಟಿ.ಎಂ. ಬೈಕ್ , KA-22 ET-2241 ಅಕ್ಟೀವಾ ಸ್ಕೂಟರ್ ಇತ್ಯಾದಿ
ವಾಹನದ ಚಾಲಕರು ತನ್ನ ವಾಹನವನ್ನು ಕೋವಿಡ್-19 ಕೊರೋನಾ ವೈರಸ್ ಸಂಕ್ರಾಮಿಕ ರೋಗದ ಸೋಂಕು
ಹರಡುವ ಸಂಭವವಿದೆ ಎಂದು ತಿಳಿದಿದ್ದು ನಿರ್ಲಕ್ಷ್ಯತನದಿಂದ ಅವಶ್ಯಕತೆಗಾಗಿ ಹೊರತು ಪಡಿಸಿ ಜನಸಂಚಾರ ಮತ್ತು
ವಾಹನ ಸಂಚಾರಕ್ಕೆ ನಿರ್ಬಂಧವನ್ನು ಮಾನ್ಯ ದಕ್ಷಿಣಕನ್ನಡ ಜಿಲ್ಲಾಧಿಕಾರಿಯವರು ಈಗಾಗಲೇ ಹೊರಡಿಸಿರುವ
ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಈ ಮೇಲ್ಕಾಣಿಸಿದ ವಾಹನಗಳನ್ನು ಚಲಾಯಿಸಿದ ವಾಹನದ ಚಾಲಕರು
ಸಾರ್ವಜನಿಕ ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸಿದ ಕಾರಣ ಕರೋನ ವೈರಾಸ್ ಸೋಂಕು ಹರಡಲು ಸಾಧ್ಯತೆ
ಇದ್ದುದರಿಂದ ವಾಹನ ಸವಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿರುವುದಾಗಿದೆ ಎಂಬಿತ್ಯಾದಿ.
2) ಪ್ರಕರಣದ ಸಾರಾಂಶವೇನೆಂದರೆ, ದಿನಾಂಕ : 21..05.2021 ರಂದು ಸಾಂಕ್ರಾಮಿಕ ರೋಗವಾದ
ಕೋವಿಡ್ -19, ಕೊರೋನಾ ಸಾಂಕ್ರಾಮಿಕ ಖಾಯಿಲೆ ಹಿನ್ನಲೆ ಯಲ್ಲಿ ರಾಜ್ಯಾದ್ಯಾಂತ ಲಾಕ್ ಡೌನ್
ಘೋಷಣೆಯಾಗಿದ್ದು ಅದರಂತೆ ಸರಕಾರದ ಮಾರ್ಗಸೂಚಿಯಂತೆ ಬೆಳಿಗ್ಗೆ 06:00 ಗಂಟೆಯಿಂದ 10:00
ಗಂಟೆ ವರೆಗೆ ಅಗತ್ಯ ವಸ್ತುಗಳ ಅಂಗಡಿಗಳನ್ನು ತೆರೆಯಲು ಸರಕಾರವು ಸಮಯವಕಾಶವನ್ನು
ನೀಡಿರುತ್ತದೆ. ಆದರೆ ಈ ದಿನ ನಗರದ ಉರ್ವಾ ಮಾರಿಗುಡಿ ದೇವಸ್ಥಾನ ಹತ್ತಿರ ಇರುವ ಗ್ರೋಸ್ವಲ್ಡ್
ಎಂಬ ಅಂಗಡಿಯ ಶಟರ್ ತೆರೆದು ನಿಗದಿತ ಸಮಯ ಕಳೆದರೂ ವ್ಯಾಪಾರ ಮಾಡಿಕೊಂಡಿರುವ ಬಗ್ಗೆ
ಮೇಲಾದಿಕಾರಿಗಳಿಗೆ ಬಂದ ಮಾಹಿತಿಯಂತೆ ಠಾಣೆಯಲ್ಲಿ ಕರ್ತವ್ಯದ್ದಲ್ಲಿದ್ದ, ಪಿರ್ಯಾದುದಾರರಿಗೆ ಪಿಐ
ರವರು ಸದ್ರಿ ಅಂಗಡಿಯನ್ನು ಪರಿಶೀಲಿಸುವರೇ ತಿಳಿಸಿದಂತೆ ಪಿರ್ಯಾದುದಾರರು ಕೂಡಲೇ ಸದ್ರಿ ಸ್ಥಳಕ್ಕೆ
ಪಂಚಾಯತುದಾರರು ಗಾಹೂ ಠಾಣಾ ಸಿಬ್ಬಂದಿಗಳೊಂದಿಗೆ, ಠಾಣೆಯಿಂದ ತನಿಖೆಗೆ ಸಂಬಂದಿಸಿದ
ಪರಿಕರಗಳೊಂದಿಗೆ ಸಮಯ 14:00 ಗಂಟೆ ವೇಳೆಗೆ ಹೊರಟು ಸಮಯ 14:15 ಗಂಟೆ ವೇಳೆಗೆ ಮಾಹಿತಿ

ಬಂದ ಸ್ಥಳವಾದ ಅಂಗಡಿ ಬಳಿಗೆ ತಲುಪಿ ಪಂಚಾಯತುದಾರರ ಸಮಕ್ಷಮದಲ್ಲಿ ಪರಿಶೀಲಿಸಿದಾಗ ಸದ್ರಿ
ಅಂಗಡಿಯ ಮುಂಭಾಗದ ಶೆಟರ್ ಬಾಗಿಲನ್ನು ತೆರೆದು ವ್ಯಾಪಾರ ಮಾಡಿಕೊಂಡು ಇರುವುದು ಕಂಡು
ಬಂದಿರುತ್ತದೆ. ಸದ್ರಿ ಅಂಗಡಿಯಲ್ಲಿದ್ದ ಮಾಲಿಕರನ್ನು ವಿಚಾರಿಸಿಕೊಂಡು ಅವರ ಹೆಸರು ವಿಳಾಸ
ಪಡೆಯಲಾಗಿ ಪ್ರಶಾಂತ್ ಕುಮಾರ್ ಶೆಟ್ಟಿ (41) ತಂದೆ : ಸೀತಾರಾಮ ಶೆಟ್ಟಿ, ವಾಸ: ರಾಜೀವ್ ನಿಲಯ,
4 ನೇ ಕ್ರಾಸ್ ಮಠದ ಕಣಿ, ಮಂಗಳೂರು ಎಂಬುದಾಗಿ ತಿಳಿಸಿರುತ್ತದೆ. ತಕ್ಷೀರು ನಡೆದ ಅಂಗಡಿ ಇರುವ
ಕಟ್ಟಡ ಹೆಸರು ಲ್ಯಾಂಡ್ ಟ್ರೇಡರ್ಸ್ ವಸುಂದರಾ ಅಪಾರ್ಟ್ ಮೆಂಟ್, ಆಗಿರುತ್ತದೆ. ಸದ್ರಿ ಘಟನೆ ನಡೆದ
ಡೋರ್ ನಂಬ್ರ 1-S-24-1982/3 ಆಗಿರುತ್ತದೆ. . ಪ್ರಸ್ತುತ ಕೊರೋನಾ ಸಾಂಕ್ರಾಮಿಕ ರೋಗವು ತೀವ್ರ
ಗತಿಯಲ್ಲಿ ಹರಡುತ್ತಿದ್ದು ಸದ್ರಿ ಅಂಗಡಿಯ ಮಾಲಿಕರು ಯಾವುದೇ ರೀತಿಯಲ್ಲಿ ಲಾಕ್ ಡೌನ್
ನಿಯಮವನ್ನು ಪಾಲಿಸದೆ ಸಾಂಕ್ರಮಿಕ ರೋಗವಾದ ಕೊರೋನಾ ವೈರಸ್ ನ್ನು ಹರಡಲು
ಸಾದ್ಯತೆಯನ್ನು ಉಂಟು ಮಾಡಿದ್ದು, ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕಾಗಿ ನೀಡಿದ
ಪಿರ್ಯಾದು ಸಾರಾಂಶವಾಗಿರುತ್ತದೆ.
Crime Reported in Mangalore East PS
ದಿನಾಂಕ: 21-05-2021 ರಂದು 14.30 ಗಂಟೆಗೆ ಪಿರ್ಯಾದಿದಾರರು ಕಚೇರಿಯಲ್ಲಿರುವ ಸಮಯ
ಮಂಗಳೂರು ನಗರದ ಪದವು ಗ್ರಾಮದ ಬಿಕರ್ನಕಟ್ಟೆಯಲ್ಲಿರುವ ಶ್ರೀಮತಿ ಪ್ರಭಾವತಿ ಎಂಬವರ ಬಾಡಿಗೆ ಮನೆ
ನಂಬ್ರ 7-86 ರಲ್ಲಿ ಜುಗಾರಿ ಆಟವನ್ನು ಆಡುತ್ತಿರುವ ಬಗ್ಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿಯ
ಮೇರೆಗೆ ಮೇಲಾಧಿಕಾರಿಗಳ ಅನುಮತಿಯನ್ನು ಪಡೆದುಕೊಂಡು, ಪಿರ್ಯಾದಿದಾರರು ಸದ್ರಿ ಮನೆಗೆ ಇಲಾಖಾ
ವಾಹನ ನಂಬ್ರ KA19G598 ಮತ್ತು KA19G 865 ರಲ್ಲಿ ಸಿಬ್ಬಂದಿಯವರನ್ನು ಕರೆದುಕೊಂಡು
ಕಚೇರಿಯಿಂದ 16.45 ಗಂಟೆಗೆ ಹೊರಟು ಮಾಹಿತಿ ಬಂದ ಸ್ಥಳವಾದ ಬಿಕರ್ನಕಟ್ಟೆಗೆ 17.15 ಗಂಟೆಗೆ ತಲುಪಿ
ದೂರದಲ್ಲಿ ವಾಹನವನ್ನು ನಿಲ್ಲಿಸಿ, ಕಾಲುದಾರಿಯಲ್ಲಿ ನಡೆದುಕೊಂಡು ಮಾಹಿತಿ ಬಂದ ಮನೆಯನ್ನು
ಸುತ್ತುವರಿದಾಗ ಮನೆಯ ಕೋಣೆಯೊಂದರಲ್ಲಿ ನೆಲದಲ್ಲಿ ಬೆಡ್ ಶೀಟನ್ನು ಬಿಡಿಸಿ ಸುತ್ತಳು ಕುಳಿತುಕೊಂಡು
ಇಸ್ಪೀಟ್ ಎಲೆಗಳನ್ನು ಹಾಕುತಾ ಅಂದರ್ ಬಾಹರ್ ಉಲಾಯಿ ಪಿದಾಯಿ ಎಂಬ ಜುಗಾರಿ ಆಟವನ್ನು
ಆಡುತ್ತಿದ್ದುದನ್ನು ಖಚಿತಡಿಸಿಕೊಂಡು ಸ್ಥಳಕ್ಕೆ ದಾಳಿಮಾಡಿ ಜುಗಾರಿ ಆಟದಲ್ಲಿ ತೊಡಗಿದ್ದ 1..ರಾಜೇಂದ್ರ
ಹಲ್ದಾರ್ 2. ಕನಕ್ಕಪ್ಪ ಕೋಟಿ, 3. ರಾಘವೇಂದ್ರ, 4. ಉಮೇಶ ರಾಮಪ್ಪ ಚೌಡಪ್ಪ, 5. ಲಕ್ಮಪ್ಪ, 6.
ರೋಹನ್ ಎಲ್. @ ರಂಗಪ್ಪ, 7. ಲಕ್ಕಪ್ಪ, 8. ಹನುಮಪ್ಪ ವಾಲಿಕ್ಕಾರ್, 9. ಬಾಸ್ಕರ, 10. ಚಿದಾನಂದ,
11. ಶಿವಲಿಂಗಪ್ಪ. ಇವರುಗಳನ್ನು ವಶಕ್ಕೆ ಪಡೆದು ಆಟಕ್ಕೆ ಉಪಯೋಗಿಸಿದ ನಗದುರೂ 90,000/-,10
ಮೊಬೈಲ್ ಫೋನ್, ಬೆಡ್ ಶೀಟ್-1, ಇಸ್ಫೀಟ್ ಎಲೆಗಳು ಮಹಜರು ಮುಖೇನಾ ವಶಪಡಿಸಿಕೊಂಡಿದ್ದು,
ವಶಪಡಿಸಿಕೊಂಡ ಸೊತ್ತಿನ ಅಂದಾಜು ಮೌಲ್ಯ ಒಟ್ಟು 1,76,800/ ಆಗಿರುತ್ತದೆ. ಈ ಅಕ್ರಮ
ಜೂಜಾಟವನ್ನು ರಾಜೇಂದ್ರ ಹಲ್ದಾರ್ ಎಂಬಾತನು ಇತರ ಆರೋಪಿಗಳನ್ನು ಸೇರಿಸಿಕೊಮಡು ಲಾಕ್ ಡೌನ್
ಆದೇಶವನ್ನು ಉಲ್ಲಂಘನೆ ಮಾಡಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ, ಸರಿಯಾಗಿ ಮಾಸ್ಕನ್ನು
ದರಿಸದೆ, ಸಾರ್ವಜನಿಕರನ್ನು ತನ್ನ ಬಾಡಿಗೆ ಮನೆಯಲ್ಲಿ ಸೇರಿಸಿ ತನ್ನ ಲಾಭಕ್ಕೋಸ್ಕರ ಇಸ್ಫೀಟ್ ಎಲೆಗಳ
ಸಂಖೈ ಮತ್ತು ಚಿನ್ನೆಗಳ ಆದಾರದ ಮೇಲೆ ಅದೃಷ್ಟದ ಇಸ್ಫೀಟ್ ಜೂಜಾಟವನ್ನು ಆಡುತ್ತಿರುವುದಾಗಿ
ಎಂಬಿತ್ಯಾದಿ
CRIME REPORTED IN TRAFFIC NORTH PS

ದಿನಾಂಕ:21-05-2021 ರಂದು ಸಮಯ ಸಂಜೆ 17-40 ಗಂಟೆಗೆ ಪಿರ್ಯಾದಿದಾರರಾದ ಸಾಜನ್ ಎಸ್ ರವರ
ಸೆಕ್ಯೂರಿಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಮಧು ಎಂಬುವರು ಬೈಸಿಕಲ್ ನಲ್ಲಿ ಕುಳಾಯಿ ಕಡೆಯಿಂದ
ಪಣಂಬೂರು ಎನ್.ಎಂ.ಪಿ.ಟಿ ಕಡೆಗೆ ಹೋಗುತ್ತಾ ಪಣಂಬೂರು ಪೊಲೀಸ್ ಠಾಣೆಗೆ ಹೋಗುವ ಕ್ರಾಸ್ ರಸ್ತೆಯ
ಬಳಿ ತಲುಪಿದಾಗ ಮಧುರವರ ಹಿಂದಿನಿಂದ ಅಂದರೆ ಜೋಕಟ್ಟೆ ಕ್ರಾಸ್ ಕಡೆಯಿಂದ NL-01-AA-4358 ನೇ
ನಂಬ್ರದ ಲಾರಿಯನ್ನು ಅದರ ಚಾಲಕ ದಿಲ್ ವಾಗ್ ಸಿಂಗ್ ಎಂಬುವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ
ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಮಧುರವರಿಗೆ ಡಿಕ್ಕಿ ಪಡಿಸಿದ ಪರಿಣಾಮ
ಮಧುರವರು ರಸ್ತೆಗೆ ಬಿದ್ದು ಅವರ ತಲೆಯ ಮೇಲೆ ಲಾರಿಯ ಚಕ್ರ ಚಲಿಸಿ ತಲೆಗೆ ಗಂಭೀರ ಸ್ವರೂಪದ
ಗಾಯವಾಗಿ ಮೃತಪಟ್ಟಿರುವುದಾಗಿ ಪಿರ್ಯಾದಿ ಸಾರಾಂಶ.
CRIME REPORTED IN SURATHKAL PS
ಈ ದಿನ 21-05-2021 ರಂದು ಪಿ.ಎಸ್.ಐ ಅಪರಾದ ವಿಭಾಗ ರವರು ರೌಂಡ್ಸ್
ಕರ್ತವ್ಯದಲ್ಲಿದ್ದು,ಪ್ಯಾರಡೈಸ್ ಮೈದಾನದಲ್ಲಿದ್ದ ಉಮ್ಮರ್ ಫಾರೂಕ್ ಎಂಬಾತನು ತನ್ನ ನಡವಳಿಕೆಯಲ್ಲಿ
ಅಮಲು ಪದಾರ್ಥ ಸೇವಿಸಿದಂತೆ ಕಂಡು ಬಂದ ಮೇರೆಗೆ ಆತನನ್ನು ಠಾಣಾ ಸಿಬ್ಬಂದಿಯವರ ಭದ್ರಿಕೆಯಲ್ಲಿ
ವೈದ್ಯಕೀಯ ಪರೀಕ್ಷೆ ನಡೆಸುವ ಬಗ್ಗೆ ಕಳುಹಿಸಿ ಕೊಡಲಾಗಿ ಪರೀಕ್ಷೆ ನಡೆಸಿದ ಏ.ಜೆ.ವೈಧ್ಯಕೀಯ ಮಹಾ
ವಿದ್ಯಾಲಯದ ವೈದ್ಯಾಧಿಕಾರಿಯವರು ತಮ್ಮ ವರದಿಯಲ್ಲಿ Tetrahydracannabinoid –
POSITIVE ಎಂಬುದಾಗಿ ವರದಿ ನೀಡಿದ್ದು ಆಪಾದಿತನು ನಿಷೇದಿತ ಗಾಂಜಾ ಸೇವನೆ ಮಾಡಿರುವುದು ಧೃಡ
ಪಟ್ಟಿರುವುದರಿಂದ ಆತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿರುವುದಾಗಿದೆ.ಎಂಬಿತ್ಯಾದಿ.
CRIME REPORTED IN MOODABIDRE PS
ದಿನಾಂಕ: 18-05-2021 ರಂದು ಪಿರ್ಯಾದಿ Aldrin Fernandes ರವರು ಪೊನ್ನೆಚ್ಚಾರಿಯ ನಿತ್ಯಾದರ್
ಆರೇಂಜರ್ಸ್ ಅಂಗಡಿಗೆ ಹೋಗುವ ಸಲುವಾಗಿ ಪಿರ್ಯಾದಿದಾರರ ಹೆಂಡತಿಯ ಮಾಲೀಕತ್ವದ ಕೆಎ-19-
ಇಎಕ್ಸ್-7761 ನಂಬ್ರದ ಸ್ಕೂಟರ್ ನಲ್ಲಿ ತನ್ನ ಮನೆಯಾದ ಮಾಸ್ತಿಕಟ್ಟೆಯಿಂದ ಚಲಾಯಿಸಿಕೊಂಡು ಹೋಗಿ
ಸ್ಕೂಟರ್‌ನ್ನು ಅವರ ಅಂಗಡಿಯ ಓಣಿಯಲ್ಲಿ ಸಮಯ ಸುಮಾರು 09-15 ಗಂಟೆಗೆ ಪಾರ್ಕ್ ಮಾಡಿ
ಅಂಗಡಿಯ ಹಿಂದಿರುವ ಸಂಬಂಧಿಕರ ಮನಗೆ ಹೋಗಿ ಮಾತುಕತೆ ನಡೆಸಿ ಸಮಯ ಸುಮಾರು 11.30 ಗಂಟೆಗೆ
ಬಂದು ನೋಡಿದಾಗ ಸ್ಕೂಟರ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಆಸುಪಾಸು
ಹುಡುಕಾಡಿದರು ಇಲ್ಲಿಯವರೆಗೆ ಪತ್ತೆಯಾಗದೇ ಇರುವುದರಿಂದ ಈ ದಿನ ತಡವಾಗಿ ದೂರು
ನೀಡಿರುವುದಾಗಿದೆ.ಈ ಸ್ಕೂಟರ್ ನ ಅಂದಾಜು ಮೌಲ್ಯ 45000/- ಆಗಬಹುದು.

2.CRIME REPORTED IN KANKANADY TOWN PS
ಕೋವಿಡ್ -19 ಸಾಂಕ್ರಮಿಕ ರೋಗವಾಗಿದ್ದು ಸಾಮಾಜಿಕವಾಗಿ ಹರಡುತ್ತಿರುವ ಕಾರಣದಿಂದ ಪಿರ್ಯಾದಿದಾರರಾದ
ಪಿಎಸ್ಐ ರಘು ನಾಯಕ್ ರವರು ಸಿಬ್ಬಂದಿಯವರೊಂದಿಗೆ ದಿನಾಂಕ 22-05-2021 ರಂದು ಮೇಲಾಧಿಕಾರಿಗಳ
ಅದೇಶದಂತೆ ಠಾಣಾ ವ್ಯಾಪ್ತಿಯಲ್ಲಿ ಮಾನ್ಯ ಕರ್ನಾಟಕ ಸರ್ಕಾರದ ಮಾರ್ಗಸೂಚಿ ಆದೇಶಗಳನ್ನು ಸಾರ್ವಜನಿಕರು

ಕಟ್ಟುನಿಟ್ಟಾಗಿ ಪಾಲಿಸುತ್ತಾರೆಯೇ ಎಂಬ ಬಗ್ಗೆ ನಿಗಾ ವಹಿಸಲು ಮತ್ತು ಕಾಯ್ದೆಯ ಅದೇಶಗಳನ್ನು ಉಲ್ಲಂಘಿಸುವವರ
ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಿಬ್ಬಂದಿಗಳೊಂದಿಗೆ ಗಸ್ತು ಕರ್ತವ್ಯದಲ್ಲಿದ್ದು ಸುಮಾರು
ಬೆಳಗ್ಗೆ 10.15 ಗಂಟೆಗೆ ಮಂಗಳೂರು ನಗರದ ಕಣ್ಣೂರು ಗ್ರಾಮದ ಕಣ್ಣೂರು ಜಂಕ್ಷನ್ ನಲ್ಲಿರುವ ಮೇಟ್ರೋ
ಸೂಪರ್ ಬಜಾರ್ ಅಂಗಡಿಯ ಮಾಲೀಕರು ಕೋವಿಡ್-19 ಮುಂಜಾಗ್ರತಾ ಕ್ರಮದ ಬಗ್ಗೆ ಮಾನ್ಯ ಕರ್ನಾಟಕ ಸರ್ಕಾರ
ಹೊರಡಿಸಿದ ಲಾಕ್ ಡೌನ್ ಆದೇಶವನ್ನು ಪಾಲಿಸದೇ, ಅಂಗಡಿಯನ್ನು ತೆರೆದು ವ್ಯವಹಾರ ಮಾಡುತ್ತಿರುವುದಿಂದ ಕ್ರಮಕ್ಕಾಗಿ
ವರದಿ ನೀಡಿರುವುದಾಗಿದೆ ಎಂಬಿತ್ಯಾದಿ.
3.CRIME REPORTED IN KONAJE PS
ದಿನಾಂಕ 22-05-2021 ರಂದು ಪಿರ್ಯಾದಿ Mallikarajun Biradar PSI L&O ರೌಂಡ್ಸ್ ಕರ್ತವ್ಯದಲ್ಲಿರುವ
ಸಮಯ ಮಧ್ಯಾಹ್ನ ಸುಮಾರು 12:00 ಗಂಟೆಗೆ ಮಂಗಳೂರು ತಾಲೂಕು ಮಂಜನಾಡಿ ಗ್ರಾಮದ ನಾಟೆಕಲ್ ವಿಜಯ ನಗರ
ಎಂಬಲ್ಲಿ ಕಿನ್ಯಾ ಕಡೆಗೆ ಹೋಗುವ ರಸ್ತೆ ಬದಿಯಲ್ಲಿ ಧೂಮಪಾನ ಮಾಡಿ, ಪೊಲೀಸರನ್ನು ಕಂಡು ಗಾಬರಿಯಿಂದ
ವರ್ತಿಸುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಆತನು ಗಾಂಜಾ ಎಂಬ ಮಾದಕ ವಸ್ತುವನ್ನು ಸೇವನೆ
ಮಾಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆ ನಡೆಸಿ
ಗಾಂಜಾ ಸೇವನೆ ಮಾಡಿದ ಬಗ್ಗೆ ದೃಢಪಟ್ಟ ಮೇರೆಗೆ ಕಾನೂನು ಕ್ರಮಕೈಗೊಳ್ಳಲಾಗಿದೆ
2) ದಿನಾಂಕ 23-04-2021 ರಂದು ಪಿರ್ಯಾದಿದಾರರಾದ ನಿತೇಶ್ ಹೊಸಗದ್ದೆ ರವರು ಕರ್ತವ್ಯ ನಿರ್ವಹಿಸುತ್ತಿರುವ
ಕಛೇರಿಯ ಅಧಿಕಾರ ವ್ಯಾಪ್ತಿಗೆ ಒಳಪಡುವಂತಹ ಮಂಜನಾಡಿ ಗ್ರಾಮದ ಮಂಗಳಾಂತಿ ಎಂಬಲ್ಲಿಯ ರಸ್ತೆ ಬದಿಯಲ್ಲಿರುವ
ವಿದ್ಯುತ್ ಕಂಬಗಳು, 2 (ಎರಡು) ಸಂಖ್ಯೆಯ ವಿದ್ಯುತ್ ಕಂಬ, ಉಳ್ಳಾಲ-2 ಮೆಸ್ಕಾಂ ಶಾಖಾ ವ್ಯಾಪ್ತಿಯ, ವಿದ್ಯುತ್
ಕಂಬಕ್ಕೆ KA-02-AB-1850 ನೇದರ ನಂಬರಿನ ಪಿಕಪ್ ವಾಹನ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ
ವಾಹನವನ್ನು ಚಲಾಯಿಸುತ್ತಿರುವ ಸಮಯ ಸುಮಾರು ಸಂಜೆ 6:30 ಗಂಟೆಗೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು
ಪರಾರಿಯಾಗಿರುತ್ತಾನೆ. ಈ ಅಪಘಾತದಿಂದ ವಿದ್ಯುತ್ ಕಂಬ ತುಂಡಾಗಿ ಸರ್ಕಾರಿ ಸೌಮ್ಯಕ್ಕೆ ಒಳಪಟ್ಟ ಮೆಸ್ಕಾಂ ಕಂಪನಿಗೆ
ಸುಮಾರು 30,335 ರೂಪಾಯಿ ಗಳಷ್ಟು ನಷ್ಟ ಉಂಟಾಗಿರುತ್ತದೆ. ಎಂಬಿತ್ಯಾದಿ.
5.CRIME REPORTED IN KAVOOR PS
ತಾರೀಕು 22/05/2021 ರಂದು ಫಿರ್ಯಾದಿದಾರರು HARISH H V PSI L&O ಕಾವೂರು ಠಾಣಾ ಸರಹದ್ದಿನಲ್ಲಿ ಕೆ ಎ
19 ಜಿ 549 ನಂಬ್ರದ ಇಲಾಖಾ ವಾಹನದಲ್ಲಿ ರೌಂಡ್ಸ್ ಮಾಡುತ್ತಾ ದೇರೆಬೈಲ್ ನಿಂದ ಆಕಾಶಭವನದ ಕಡೆಗೆ
ಹೋಗುತ್ತಿದ್ದಾಗ ಸಮಯ ಸುಮಾರು ಬೆಳಗ್ಗೆ 12:15 ರ ವೇಳೆಗೆ ಮುಲ್ಲಕಾಡು ಕೋಟೆದ ಬಬ್ಬು ಸ್ವಾಮಿ ಕಾಂಪ್ಲೆಕ್ಸ್
ನಲ್ಲಿರುವ ನ್ಯೂ ಸ್ಟಾರ್ ಹೇರ್ ಕಟಿಂಗ್ ಸಲೂನ್ ಎಂಬ ಹೆಸರಿನ ಅಂಗಡಿಯು ತೆರೆದುಕೊಂಡಿದ್ದು, ಅಂಗಡಿ ಒಳಗಡೆ
ಆಪಾದಿತ ವಿಕ್ರಮ್ ಸಾಲ್ಯಾನ್ ಎಂಬವರು ನಿಗದಿತ ಸಮಯವನ್ನು ಮೀರಿ ಅಂಗಡಿಯನ್ನು ತೆರೆದು ಮಾನ್ಯ ದಕ್ಷಿಣ ಕನ್ನಡ
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯವರ ಮಾರ್ಗಸೂಚಿ ಆದೇಶವನ್ನು ಪಾಲಿಸದೇ ಮುಖಕ್ಕೆ ಸರಿಯಾಗಿ
ಮಾಸ್ಕ್ ಹಾಕದೇ ಗಿರಾಕಿಗಳೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳವ ಬಗ್ಗೆ ಯಾವುದೇ ಮುಂಜಾಗ್ರತಾ
ಕ್ರಮವಹಿಸದೇ ಮಾನವ ಜೀವಕ್ಕೆ ಅಪಾಯಕಾರಿಯಾದ ರೋಗದ ಸೋಂಕು ಹರಡುವ ಸಂಭವಿರುವುದನ್ನು ತಿಳಿದು ಕೂಡ
ನಿರ್ಲಕ್ಷವಹಿಸಿರುವುದರಿಂದ ಇವರ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.
6.CRIME REPORTED IN SOUTH PS

ದಿನಾಂಕ 22-05-2021 ರಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪಿ.ಎಸ್.ಐ ಮಂಜುಳಾ (ಕಾ&ಸು-2) ಆದ
ನಾನು, ಠಾಣಾ ಸಿಬ್ಬಂದಿಯೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಮಾಹಿತಿ ಬಂದಂತೆ, ಬೆಳಿಗ್ಗೆ ಸಮಯ ಸುಮಾರು 10-
45 ಗಂಟೆಗೆ ಮಂಗಳೂರು ನಗರದ ಕಾಫ್ರಿಗುಡ್ಡೆ ರಸ್ತೆಯಲ್ಲಿ ಎಸ್.ಎಲ್ ಮಥಾಯಿಸ್ ಪಾರ್ಕ್ ಬಳಿ “KPM Fruits &
Vegetables” ಎಂಬ ಹೆಸರಿನ ಹಣ್ಣು & ತರಕಾರಿ ಮಾರಾಟ ಮಾಡುವ ಅಂಗಡಿ ಮಾಲಕ, ಮಾನ್ಯ ದಕ್ಷಿಣ ಕನ್ನಡ
ಜಿಲ್ಲಾಧಿಕಾರಿಯವರು ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಯಲು ಮಾರ್ಗಸೂಚಿಗಳನ್ನು ಹೊರಡಿಸಿ ಬೆಳಿಗ್ಗೆ
06-00 ಗಂಟೆಯಿಂದ ಬೆಳಿಗ್ಗೆ 09-00 ಗಂಟೆಯ ವರೆಗೆ ಮಾತ್ರ ವ್ಯಾಪಾರ ಮಾಡಿ ಬಳಿಕ ಬೆಳಿಗ್ಗೆ 10-00 ಗಂಟೆಯ
ಒಳಗೆ ಅಂಗಡಿಗಳನ್ನು ಮುಚ್ಚಿ ಮನೆಗೆ ತೆರಳುವಂತೆ ಆದೇಶಿಸಿರುವುದನ್ನು ತಿಳಿದೂ ಕೂಡ, ಹಾಗೂ ಕೋವಿಡ್ 19
ಸಾಂಕ್ರಾಮಿಕ ರೋಗವು ಒಬ್ಬರಿಂದ ಒಬ್ಬರಿಗೆ ಹರಡಿ ಮಾನವ ಜೀವಕ್ಕೆ ಹಾನಿಯಾಗುತ್ತದೆ ಎಂಬ ವಿಷಯ ತಿಳಿದೂ ಕೂಡ,
ಅಂಗಡಿ ಮಾಲಕರು ಜಿಲ್ಲಾಧಿಕಾರಿಯವರ ಆದೇಶದಲ್ಲಿ ನಿಗದಿ ಪಡಿಸಿದ ವೇಳೆಗಿಂತ ಹೆಚ್ಚಿನ ವೇಳೆಯ ವರೆಗೆ ಅಂಗಡಿಯನ್ನು
ತೆರೆದು ಮಾನ್ಯ ಜಿಲ್ಲಾಧಿಕಾರಿಗಳ ಆದೇಶಗಳನ್ನು ಉಲ್ಲಂಘಿಸಿ ನಿರ್ಲಕ್ಷ್ಯವಹಿಸಿರುವುದಾಗಿದೆ. ಹಾಗಾಗಿ ಸದ್ರಿ ಅಂಗಡಿಯ
ಮಾಲಕನ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಠಾಣೆಗೆ ಬಂದು 11-10 ಗಂಟೆಗೆ ಸರಕಾರದ ಪರವಾಗಿ
ಸ್ವಯಂ ದೂರು ದಾಖಲಿಸಿಕೊಂಡು ಠಾಣಾ ಅ.ಕ್ರ 87/2021 ಕಲಂ: 51(ಬಿ) ವಿಪತ್ತು ನಿರ್ವಹಣಾ ಕಾಯಿದೆ ಹಾಗೂ
ಕಲಂ 269 ಐ.ಪಿ.ಸಿ ಯಂತೆ ಯಂತೆ ಪ್ರಕರಣ

ಇತ್ತೀಚಿನ ನವೀಕರಣ​ : 22-05-2021 09:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080