ಅಭಿಪ್ರಾಯ / ಸಲಹೆಗಳು

Crime Reported at   Mangaluru Traffic West

  ದಿನಾಂಕ ಸಮಯ ಸುಮಾರು ಬೆಳಿಗ್ಗೆ 11.00 ಗಂಟೆಗೆ ಪಿರ್ಯಾದಿದಾರರು RAJESH ತನ್ನ ಬಾಬ್ತು KA-19-X-5273 ನೇ ಮೋಟಾರು ಸೈಕಲ್ ನಲ್ಲಿ ಉರ್ವಾ ಮಾರ್ಕೆಟ್ ಕಡೆಯಿಂದ ಲೇಡಿಹಿಲ್ ವೃತ್ತದ ಕಡೆಗೆ ಬಂದು ಲಾಲ್ ಭಾಗ್ ಕಡೆಗೆ ಹೋಗುವ ರಸ್ತೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಹಿಂದಿನಿಂದ ಅಂದರೆ  ಉರ್ವಾ ಮಾರ್ಕೇಟ್ ಕಡೆಯಿಂದ ಲೇಡಿಹಿಲ್ ವೃತ್ತದ ಕಡೆಗೆ KA-19-MJ-7889  ನೇ ಕಾರನ್ನು ಅದರ ಚಾಲಕ ನಿರ್ಮಲ್ ಕಾಂತ್ ಎಂಬವರು ಸಾರ್ವಜನಿಕ ರಸ್ತೆಯಲ್ಲಿ ತೀರಾ ನಿರ್ಲಕ್ಷ್ಯತನದಿಂದ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರ ಮೋಟಾರು ಸೈಕಲ್ ನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಎಡಕೈ ಮಣಿಗಂಟಿಗೆ ಮೂಳೆ ಮೂರಿತದ ಗಾಯ,ಬಲಕೈ ಹಾಗೂ ಎಡಕಾಲಿನ ಮೊಣಗಂಟಿಗೆ ತರಚಿದ ರಕ್ತಗಾಯವಾಗಿದ್ದು ಅಲ್ಲಿ ಸೇರಿದ ಸಾರ್ವಜನಿಕರು ಹಾಗೂ ಕಾರಿನ ಚಾಲಕನು ಉಪಚರಿಸಿದ್ದು, ಈ ಅಪಘಾತದ ವಿಚಾರವನ್ನು ಪಿರ್ಯಾದಿದಾರರು ಅವರ ಅಕ್ಕನ ಮಗ ಶ್ರೀ ಸಾವನ್ ನಿಗೆ ಮೊಬೈಲ್ ಫೋನ್ ಗೆ ಕರೆ ಮಾಡಿ ತಿಳಿಸಿದ್ದು, ಆತನು ಅಪಘಾತ ಸ್ಥಳಕ್ಕೆ ಬಂದು ಪಿರ್ಯಾದಿದಾರರನ್ನು ಉಪಚರಿಸಿ ಚಿಕಿತ್ಸೆಯ ಬಗ್ಗೆ ಅಪಘಾತವೆಸಗಿದ ಕಾರಿನಲ್ಲಿಯೇ ನಗರದ ಮಂಗಳಾ ಆಸ್ಪತ್ರೆಗೆ ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲಿರಿಸಿರುತ್ತಾರೆ ಎಂಬಿತ್ಯಾದಿ.

 

Crime Reported at   Mangaluru Traffic East PS

ಪಿರ್ಯಾದಿದಾರರಾದ JAGADISH POOJARY ಎಂಬವರು ದಿನಾಂಕ: 22-11-2021 ರಂದು ಗ್ಯಾಸ್ ಸಿಲಿಂಡರ್ ಡೆಲಿವರ್  ಕೆಲಸ ನಿಮಿತ್ತ ಗ್ಯಾಸ್ ಏಜನ್ಸಿಯ ಬಾಬ್ತು  KA-19-EM-0635  ನೇದನ್ನು ಸವಾರಿ ಮಾಡಿಕೊಂಡು  ಕೋಡಿಯಾಲ್ ಗುತ್ತು ರಸ್ತೆಯಾಗಿ ಬರುತ್ತಾ ಪಿಯೋ ಮಾಲ್ ಕಡೆಯಿಂದ ಬಿಜೈ  ಕಡೆಗೆ ಹಾದು ಹೋಗಿರುವ ಬಿಜೈ ಚರ್ಚ್ ರೋಡ್ ರಸ್ತೆಗ  ಬಂದು ತಲುಪುತ್ತಿದ್ದಂತೆ  ಸಮಯ ಸುಮಾರು ಬೆಳಿಗ್ಗೆ:10.40 ಗಂಟೆಗೆ ಪಿಯೋ ಮಾಲ್ ಕಡೆಯಿಂದ KA-19-MF-3418  ನಂಬ್ರದ ಕಾರೊಂದನ್ನು ಅದರ ಚಾಲಕ  ಹೇರಾಲ್ಡ್ ಸೀರಿಲ್ ಡಿಸೋಜಾ ಎಂಬವರು ಬಿಜೈ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ಕಾಂಕ್ರೀಟ್  ರಸ್ತೆಯಲ್ಲಿ ತನ್ನ ಕಾರನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ  ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲಿನ ಬಲಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ ಸಮೇತ ಕಾಂಕ್ರೀಟ್ ರಸ್ತೆಗೆ ಬಿದ್ದು, ಬಲಕಾಲಿನ ಮೊಣಗಂಟಿಗೆ ಬಲಕಾಲಿ ಹೆಬ್ಬೆರಳಿಗೆ  ಎರಡು ಕೈಗಳ ಮೊಣಕೈ ಗೆ ತರಚಿದ ಗಾಯವಾಗಿದ್ದು, ಅಪಘಾತ ಪಡಿಸಿದ ಕಾರಿನ ಚಾಲಕನು ಆಟೋ ರಿಕ್ಷಾಯೊಂದರಲ್ಲಿ ವಿನಯ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಕರೆದುಕೊಂಡು ಹೋಗಿರುತ್ತಾರೆ.ಪಿರ್ಯಾದಿದಾರರನ್ನು ಪರೀಕ್ಷಿಸಿದ ವೈದ್ಯರು  ಬಲಕೈ ಹೆಬ್ಬರಳಿಗೆ ಮತ್ತು ಗಂಟಿನ ಬಳಿ ಮೂಳೆ ಮುರಿತವಾಗಿದ್ದು, ಶಸ್ತ್ರ ಚಿಕಿತ್ಸೆ ಮಾಡಿಸುವ  ಅವಶ್ಯಕತೆ ಇರುವುದಾಗಿ ತಿಳಿಸಿರುತ್ತಾರೆ. ಅಪಘಾತ ಪಡಿಸಿದ ಕಾರಿನ ಚಾಲಕನು ಶಸ್ತ್ರ ಚಿಕಿತ್ಸೆ ವೆಚ್ಚ ಭರಿಸುವುದಿಲ್ಲ ಎಂಬುದಾಗಿ ತಿಳಿಸಿದ್ದರಿಂದ ಅಪಘಾತ ಬಗ್ಗೆ ದೂರು ನೀಡುತ್ತೀರುವುದಾಗಿ ಎಂಬಿತ್ಯಾದಿ.

 

Crime Reported at   Moodabidre PS

ದಿನ ದಿನಾಂಕ 21-11-2021 ರಂದು ಪಿರ್ಯಾನಧಿದಾರರಾದ ಸಂತೋಷ್ ಎಂಬವರು ಮೂಡಬಿದ್ರೆಯಲ್ಲಿರುವ ತನ್ನ ತಮ್ಮನ ಮನೆಯಲ್ಲಿರುವ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಬಂದವರು ನಂತರ ಕಾರ್ಯಕ್ರಮವನ್ನು ಮುಗಿಸಿ ವಾಪಾಸು ತನ್ನ ಮನೆಯಾದ ಕಾರ್ಕಳಕ್ಕೆ ಕೆಎ-19-ಡಿ-1210 ನಂಬ್ರದ ಸ್ಕೂಟರ್ ನಲ್ಲಿ ತನ್ನ ಮಕ್ಕಳಾದ ಧನಲಕ್ಷ್ಮಿ ಪ್ರಾಯ: 13 ವರ್ಷ, ಹಾಗೂ ಕಾವ್ಯಶ್ರೀ ಪ್ರಾಯ: 03 ವರ್ಷ ಎಂಬವರನ್ನು ಸಹಸವಾರರಾಗಿ ಸ್ಕೂಟರ್ ನಲ್ಲಿ ಕುಳ್ಳಿರಿಸಿಕೊಂಡು ಹೋಗುತ್ತಿರುವಾಗ ಪಡುಮಾರ್ನಾಡು ಗ್ರಾಮದ ಬನ್ನಡ್ಕ ಎಂಬಲ್ಲಿ ತಲುಪುತ್ತಿದ್ದಂತೆ ಕಾರ್ಕಳದಿಂದ ಮೂಡಬಿದ್ರೆ ಕಡೆಗೆ ಕೆಎ-19-ಎಮ್ಎ-0655 ನೇ ನಂಬ್ರದ ಕಾರಿನ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರಿಗೆ ಬಲಕಾಲಿನ ಮೂಳೆ ಮುರಿತದ ರಕ್ತ ಗಾಯವಾಗಿದ್ದು ಅಲ್ಲದೇ ಸಹಸವಾರರಾಗಿದ್ದ ಧನಲಕ್ಷ್ಮೀ ಹಾಗೂ  ಕಾವ್ಯಶ್ರೀ ರವರಿಗೆ ಬಲಕಾಲಿನ ಮೂಳೆ ಮುರಿತದ ಗಂಭೀರ ಸ್ವರೂದ ರಕ್ತ ಗಾಯವುಂಟಾಗಿರುವುದಾಗಿದೆ. ಎಂಬಿತ್ಯಾದಿ

Crime Reported at   Traffic South Police

ದಿನಾಂಕ   16-11-2021 ರಂದು   ಪಿರ್ಯಾದಿದಾರರ ತಂದೆಯಾದ    ಮ್ಯಾಕ್ಸಿಂ  ಟೆಲ್ಲಿಸ್   ರವರು   ಅವರ  ಮೋಟಾರ್ ಸೈಕಲ್  ನಂಬ್ರ    KA-19-EY-5385 ನೇದರಲ್ಲಿ   ಎಲ್ಯಾರ್  ಪದವು   ಕಡೆಯಿಂದ   ದೇರಳಕಟ್ಟೆ   ಯೆನಪೊಯ  ಕಡೆಗೆ    ಸವಾರಿ ಮಾಡಿಕೊಂಡು   ಹೋಗುತ್ತಿರುವ   ಸಮಯ   ಸುಮಾರು   ಬೆಳಿಗ್ಗೆ  11.30 ಗಂಟೆಗೆ   ಕುತ್ತಾರ್   ರಾಣಿಪುರ  ಬಳಿ ತಲುಪುತ್ತಿದ್ದಂತೆ   ಅವರು   ಸವಾರಿ ಮಾಡುತ್ತಿದ್ದ   ಮೋಟಾರ್ ಸೈಕಲ್ ನ್ನು   ದುಡುಕುತನ  ಹಾಗೂ ನಿರ್ಲಕ್ಷ್ಯತನದಿಂದ ಸವಾರಿ  ಮಾಡಿಕೊಂಡು ಹೋಗಿ   ನಿಯಂತ್ರಣ  ತಪ್ಪಿ  ದನವೊಂದಕ್ಕೆ  ಡಿಕ್ಕಿ ಹೊಡೆದು  ಮೋಟಾರ್ ಸೈಕಲ್  ಸಮೇತ  ರಸ್ತೆಗೆ   ಬಿದ್ದು   ಅವರ   ತಲೆಗೆ   ಬಲ ಭುಜಕ್ಕೆ   ಮತ್ತು  ಹೊಟ್ಟೆಯ   ಬಲ  ಬದಿಗೆ   ಗುದ್ದಿದ ರೀತಿಯ   ಗಾಯವಾಗಿದ್ದು  ಅವರನ್ನು   ಚಿಕಿತ್ಸೆ  ಬಗ್ಗೆ   ಅಲ್ಲಿ ಸೇರಿದ    ಸಾರ್ವಜನಿಕರು  ಯೆನಪೊಯ  ಆಸ್ಪತ್ರೆಗೆ   ಕರೆದುಕೊಂಡು ಹೋಗಿ   ದಾಖಲುಮಾಡಿರುತ್ತಾರೆ. ಈ ದಿನ  ದಿನಾಂಕ 22-11-2021 ರಂದು ಸಮಯ  ಬೆಳಿಗ್ಗೆ 04:18 ಗಂಟೆಗೆ ಯೆನಪೊಯ  ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದ ಪಿರ್ಯಾದಿದಾರ  ತಂದೆಯಾದ  ಮ್ಯಾಕ್ಸಿಂ  ಟೆಲ್ಲಿಸ್  ರವರು   ಚಿಕಿತ್ಸೆ  ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಈ ಅಪಘಾತವು  ಸ್ವತಃ ಪಿರ್ಯಾದಿದಾರರ ತಂದೆಯವರೆ ದುಡುಕುತನ ಮತ್ತು  ನಿರ್ಲಕ್ಷ್ಯತನದಿಂದ   ಸವಾರಿ ಮಾಡಿ ಆಗಿದ್ದು ಆ ವೇಳೆ ಅವರಿಗಾದ ಗಾಯವು   ಸಾಮನ್ಯ ಸ್ವರೂಪದೆಂದು ತಿಳಿದು   ಪಿರ್ಯಾದಿದಾರರು ಈ ಅಪಘಾತದ ಬಗ್ಗೆ ಕಾನೂನು ಕ್ರಮದ   ಅಗತ್ಯವಿರುವುದಿಲ್ಲವೆಂದು ಠಾಣೆಗೆ   ಬಂದು ಲಿಖಿತವಾಗಿ  ನೀಡಿದುದ್ದರಿಂದ  ಈ ಬಗ್ಗೆ   ದೂರು ನೀಡಲು  ತಡವಾಗಿರುತ್ತದೆ ಎಂಬಿತ್ಯಾದಿ  .

ಇತ್ತೀಚಿನ ನವೀಕರಣ​ : 22-11-2021 07:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080