ಅಭಿಪ್ರಾಯ / ಸಲಹೆಗಳು

          ಮಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಹಾವಳಿಯನ್ನು ತಡೆಗಟ್ಟಲು ದಿನಾಂಕ: 01-11-2023 ರಂದು ಮಾದಕ ದ್ರವ್ಯ ಜಾಗೃತಿ ಅಭಿಯಾನದ ಹಿನ್ನೆಲೆಯಲ್ಲಿ 4 ವಿಶೇಷ ತಂಡಗಳನ್ನು ರಚಿಸಲಾಯಿತು.  ಈ ತಂಡಗಳು ಸಂಬಂಧಪಟ್ಟ ಎಸಿಪಿ ರವರ ಮೇಲ್ವಿಚಾರಣೆಯಲ್ಲಿ ಕಾರ್ಯಪ್ರವೃತ್ತರಾಗಿದ್ದು, ಈ ತಂಡಗಳಿಗೆ ಹೆಚ್ಚಿನ ಜನಸಂಧಣಿ ಇರುವ ಪ್ರದೇಶಗಳನ್ನು ಪರಿಶೀಲಿಸಿ ಮಾದಕ ವಸ್ತುಗಳನ್ನು ಸೇವನೆ ಮಾಡಿದ ಶಂಕಿತ ವ್ಯಕ್ತಿಗಳ ತಪಾಸಣೆ ನಡೆಸುವ ಜವಾಬ್ದಾರಿಯನ್ನು ನೀಡಲಾಗಿತ್ತು.

ಕಳೆದ 4 ದಿವಸಗಳಲ್ಲಿ ನಗರದ ವಿವಿಧ ಕಡೆಗಳಲ್ಲಿ ಲಾಡ್ಜ್ಗಳು, ಪಬ್‌ಗಳು, ಹೋಟೇಲ್‌ಗಳು, ಹೋಂ ಸ್ಟೇಗಳು, ರೆಸಾರ್ಟ್ಗಳು ಮತ್ತು ವಿದ್ಯಾರ್ಥಿಗಳು ವಾಸವಾಗಿರುವ ಅಪಾರ್ಟ್ಮೆಂಟ್‌ಗಳನ್ನು ಪರಿಶೀಲಿಸಲಾಯಿತು.  ಈ ಅವಧಿಯಲ್ಲಿ ಮಂಗಳೂರು ನಗರದ ಪೊಲೀಸ್ ಅಧಿಕಾರಿ/ಸಿಬ್ಬಂದಿರವರು 56 ಶಂಕಿತ ವ್ಯಕ್ತಿಗಳನ್ನು ಮಾದಕ ವಸ್ತು ಸೇವನೆಗಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿರುತ್ತಾರೆ.  ವೈದ್ಯಕೀಯ ತಪಾಸಣೆಯ ಆಧಾರದ ಮೇಲೆ 27 (ಬಿ) ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ಒಟ್ಟು 12 ಮಾದಕ ವಸ್ತು ಸೇವನೆ ಪ್ರಕರಣಗಳನ್ನು ದಾಖಲಿಸಿದ್ದು, 15 ವ್ಯಕ್ತಿಗಳನ್ನು ದಸ್ತಗಿರಿಯಾಗಿರುತ್ತಾರೆ.  ದಸ್ತಗಿರಿಯಾದ ವ್ಯಕ್ತಿಗಳಿಂದ 7 ಮೊಬೈಲ್ ಫೋನ್‌ಗಳು ಮತ್ತು 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಯಿತು. 

   ಈ ಕಾರ್ಯಾಚರಣೆಯು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ. ಅನುಪಮ್ ಅಗ್ರವಾಲ್, ಐಪಿಎಸ್ ರವರ ಮಾರ್ಗದರ್ಶನದಲ್ಲಿ ನಡೆಯಿತು. ಈ ಕಾರ್ಯಾಚರಣೆಯನ್ನು ಎಸಿಪಿಗಳಾದ ಶ್ರೀ. ಮಹೇಶ್ ಕುಮಾರ್, ಕೇಂದ್ರ ಉಪವಿಭಾಗ, ಶ್ರೀ. ಮನೋಜ್ ಕುಮಾರ್ ನಾಯ್ಕ್, ಉತ್ತರ ಉಪವಿಭಾಗ, ಶ್ರೀಮತಿ. ಧನ್ಯಾ ನಾಯಕ್, ದಕ್ಷಿಣ ಉಪವಿಭಾಗ ಹಾಗೂ ಶ್ರೀ. ಪಿ.ಎ. ಹೆಗ್ಡೆ, ನಗರ ಅಪರಾಧ ಪತ್ತೆ ದಳ ಹಾಗೂ ತಮ್ಮ ತಮ್ಮ ಉಪವಿಭಾಗದ ಸಿಬ್ಬಂದಿರವರ ಜೊತೆಯಲ್ಲಿ ನಡೆಸಿದರು. 

 

ದಿನಾಂಕ: 06-11-2023

ಸ್ಥಳ: ಮಂಗಳೂರು                                                                            ಪೊಲೀಸ್ ಆಯುಕ್ತರು

                                                                                                            ಮಂಗಳೂರು ನಗರ

ಇತ್ತೀಚಿನ ನವೀಕರಣ​ : 06-11-2023 06:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080